Latest

ನಿರ್ಭಯಾ ಪ್ರಕರಣ : ಆರೋಪಿಗಳನ್ನು ಗಲ್ಲಿಗೇರಿಸಲು ಸಿದ್ಧತೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ನವದೆಹಲಿ : ನಿರ್ಭಯಾ ಪ್ರಕರಣದಲ್ಲಿನ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲು ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪವನ್ ಕುಮಾರ್ ಗುಪ್ತಾ ಸದ್ಯ ಮಾಂಡೋಲಿ ಜೈಲಿನಲ್ಲಿದ್ದಾರೆ. ನಾಲ್ವರು ಅಪರಾಧಿಗಳಿಗೆ ಶೀಘ್ರದಲ್ಲೇ ಮರಣದಂಡನೆ ವಿಧಿಸುವ ಸಾಧ್ಯತೆ ಇದೆ..

ಪವನ್ ಕುಮಾರ್ ಗುಪ್ತಾ ನನ್ನು ಮಂಡೋಲಿ ಜೈಲಿನಿಂದ ದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಪ್ರಕರಣದ ಇತರ ಆರೋಪಿಗಳಾದ ಮುಖೇಶ್ ಸಿಂಗ್, ವಿನಯ್ ಶರ್ಮಾ ಮತ್ತು ಅಕ್ಷಯ್ ಅವರು ತಿಹಾರ್ ಜೈಲಿನಲ್ಲಿದ್ದಾರೆ. ಮಂಡೋಲಿ ಜೈಲಿನಲ್ಲಿರುವ ನಿರ್ಭಯಾ ಪ್ರಕರಣದ ದೋಷಿಯನ್ನು ಹೆಚ್ಚಿನ ಭದ್ರತೆಯ ಮಧ್ಯೆ ತಿಹಾರ್‌ನಲ್ಲಿರುವ ಜೈಲಿನ ಎರಡನೇ ಸಂಖ್ಯೆ ಕೊಠಡಿಗೆ ಕರೆತರಲಾಗಿದೆ.

ನಿರ್ಭಯ ದೋಷಿ ಸಲ್ಲಿಸಿರುವ ಕ್ಷಮೆ ಅರ್ಜಿಯನ್ನು ಅಧ್ಯಕ್ಷ ರಾಮನಾಥ್ ಕೋವಿಂದ್ ತಿರಸ್ಕರಿಸಿದ 14 ದಿನಗಳ ನಂತರ ಅವರನ್ನು ಗಲ್ಲಿಗೇರಿಸುವ ಸಾಧ್ಯತೆ ಇದೆ. ಈ 14 ದಿನಗಳಲ್ಲಿ ನ್ಯಾಯಾಲಯ ಡೆತ್ ವಾರಂಟ್ ಹೊರಡಿಸಲಿದೆ. ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನಂತರ 14 ದಿನಗಳ ಅವಧಿಯನ್ನು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜಿಸುತ್ತಿವೆ.

Home add -Advt

ನಿರ್ಭಯಾ ಪ್ರಕರಣದ ಆರೋಪಿ ಅಕ್ಷಯ್ ಠಾಕೂರ್ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ರಿವ್ಯೂ ಅರ್ಜಿ ಸಲ್ಲಿಸಿದ್ದಾರೆ. 2012 ರ ಡಿಸೆಂಬರ್ 16 ರಂದು ನಿರ್ಭಯಾ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಒಬ್ಬರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ನಿರ್ಭಯಾ ಪ್ರಕರಣದಲ್ಲಿ ತಪ್ಪಿತಸ್ಥರಾದ ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಮತ್ತು ಪವನ್ ಕುಮಾರ್ ಗುಪ್ತಾ ಅವರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನ ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ.

Related Articles

Back to top button