Latest

ತಂಗಿಯನ್ನು ಚುಡಾಯಿಸುತ್ತಿದ್ದ ಯುವಕ; ಚಾಕುವಿನಿಂದ ಇರಿದು ಹತ್ಯೆಗೈದ ಅಣ್ಣ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ತನ್ನ ಸಹೋದರಿಯನ್ನು ಚುಡಾಯಿಸುತ್ತಿದ್ದ ಯುವಕನನ್ನು ಅಣ್ಣ ಹಾಗೂ ಆತನ ಸ್ನೇಹಿತ ಸೇರಿ 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಾರೋಬಂಡೆ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಕೋಟೆ ಬಡಾವಣೆಯ ನಿವಾಸಿ ನಂದನ್ ಮೃತ ಯುವಕ. ದರ್ಶನ್ ಹಾಗೂ ಆತನ ಸ್ನೇಹಿತ ಆಶ್ರಯ್ ಕೊಲೆ ಆರೋಪಿಗಳು. ನಂದನ್ ಎಂಬ ಯುವಕ ದರ್ಶನ್ ತಂಗಿಯನ್ನು ಚುಡಾಯಿಸುತ್ತಿದ್ದ. ಹಲವು ಬಾರಿ ದರ್ಶನ್ ನಂದನ್ ಗೆ ಬುದ್ಧಿವಾದ ಹೇಳಿದ್ದ. ಆದರೂ ಕೆಳದೇ ಮತ್ತೆ ದರ್ಶನ್ ತಂಗಿಯ ಹಿಂದೆ ಬಿದ್ದಿದ್ದ.

ದರ್ಶನ್ ಹಾಗೂ ಆತನ ಸ್ನೇಹಿತ ಆಶ್ರಯ್ ಇಬ್ಬರೂ ನಂದನ್ ಗೆ ಎಚ್ಚರಿಕೆಯನ್ನೂ ನೀಡಿದ್ದರೂ ಆದರೂ ತಿದ್ದಿಕೊಳ್ಳದ ನಂದನ್ ನನ್ನು ಇಬ್ಬರು ಯುವಕರು ಹತ್ಯೆ ಮಾಡಿದ್ದಾರೆ. ದರ್ಶನ್ ಹಾಗೂ ಸ್ನೇಹಿತ ಆಶ್ರಯ್ ಇಬ್ಬರೂ ನಂದನ್ ನನ್ನು 50ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಮನಬಂದಂತೆ ಇರಿದು ಬರ್ಬರವಾಗಿ ಕೊಲೆಗೈದಿದ್ದಾರೆ.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ದರ್ಶನ್ ಹಾಗೂ ಆಶ್ರಯ್ ಇಬ್ಬರನ್ನು ಬಂಧಿಸಿದ್ದಾರೆ.

Home add -Advt

ಗಾಂಧಿ ಜಯಂತಿಯಂದು ನಕಲಿ ಗಾಂಧಿಗಳ ಬಗ್ಗೆ ಮಾತನಾಡಲ್ಲ; ರಾಹುಲ್ ಗಾಂಧಿಗೆ ಸಿಎಂ ಬೊಮ್ಮಾಯಿ ಕೌಂಟರ್

https://pragati.taskdun.com/politics/cm-basavaraj-bommairahul-gandhistatmentreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button