
ಪ್ರಗತಿವಾಹಿನಿ ಸುದ್ದಿ: ಕಾರು ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಎಂ ಎಲ್ ಸಿ ಚನ್ನರಾಜ ಹಟ್ಟಿಹೊಳಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಅಭಿಮಾನಿಗಳು ಲಕ್ಷ್ಮೀ ಹೆಬ್ಬಾಳ್ಕರ್ ಮನೆ ದೇವರಾದ ಚಿಕ್ಕಹಟ್ಟಿಹೊಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ಮಹಾಪೂಜೆ ನೆರವೇರಿಸಿದರು.
ಅಜ್ಜನ ಸನ್ನಿಧಿಯಲ್ಲಿ ಮುಂಜಾನೆ ರುದ್ರಾಭಿಷೇಕ ಮತ್ತು ಮಹಾ ಪೂಜೆಯನ್ನು ಶ್ರೀ ಆನಂದಯ್ಯಾ ,ಚಂಬಯ್ಯ , ಶ್ರೀಶೈಲ ಪೂಜಾರ ಇವರಿಂದ ನೇರವೇರಿಸಿಲಾಯಿತು.
ಈ ಕಾರ್ಯಕ್ರಮದಲ್ಲಿ ಊರಿನ ಯುವಕರಾದ ವೀರಭದ್ರ ಸಣ್ಣಕ್ಕಿ, ರುದ್ರಯ್ಯ ಪೂಜಾರ, ವೀರಭದ್ರ ಗಡಾದ, ಸಿದ್ರಾಮ ಹುಚ್ಚನವರ, ಸುನೀಲ್ ಹುಚ್ಚನವರ, ಶಂಕರಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಶಿವಾನಂದ ಕಬ್ಬೂರ, ಸದೆಪ್ಪ ಹೊನ್ನಣವರ, ಸಿದ್ದು ಬೂಸನ್ನವರ, ಮಹಾಂತೇಶ ಪೂಜಾರ ಹಾಗೂ ಅವರ ಹಿತೈಷಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ