Latest

ಪಬ್ ಜಿ ಹುಚ್ಚಾಟ: ತಂದೆ-ಮಗನ ಜಗಳ; ಗುಂಡೇಟಿಗೆ ತಾಯಿ ಬಲಿ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಪಬ್ ಜಿ ಗೇಮ್ ಗೀಲಿಗೆ ಬಿದ್ದಿದ್ದ ಮಗನಿಗೆ ತಂದೆ ಬೈದು ಬುದ್ಧಿ ಹೇಳಿದ್ದಾರೆ. ದಿನವೆಲ್ಲ ಮೊಬೈಲ್ ಹಿಡಿದು ಪಬ್ ಜಿ ಆಡುತ್ತಾ ಹೀಗೆ ಕುಳಿತರೆ ಸಾಯಿಸಿಬಿಡುತ್ತೇನೆ ಎಂದು ಕೋಪಗೊಂಡ ಅಪ್ಪ ಮಗನಿಗೆ ಬಂದೂಕಿನಿಂದ ಕೊಲ್ಲಲು ಹೊರಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹಾಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.

ಪಬ್ ಜಿ ಗೇಮ್ ನಲ್ಲೇ ಮುಳುಗಿ ಕುಳಿತರೆ ಓದು ಬರಹ, ಕೆಲಸ ಏನೂ ಬೇಡವೇ ಎಂದು ಪ್ರಶ್ನಿಸಿದ ಅಪ್ಪ, ಇದೇ ರೀತಿ ಪಬ್ ಜಿ ಆಡುತ್ತಿದ್ದರೆ ಕೊಂದು ಬಿಡುತ್ತೇನೆ ಎಂದು ಲೋಡ್ ಆಗಿದ್ದ ಬಂದೂಕನ್ನು ಮಗನ ಮುಂದೆ ಹಿಡಿದಿದ್ದಾರೆ. ಗಾಬರಿಗೊಂಡ ತಾಯಿ ಮೈಮುನಾ ಮಗನಿಗೆ ಅಡ್ಡಲಾಗಿ ಬಂದು ನಿಂತಿದ್ದಾಳೆ. ಹೆಚ್ಚು ಕಡಿಮೆಯಾದರೆ ಗುಂಡು ಹಾರುತ್ತೆ ಇದೆಂಥ ಕೋಪ ಎಂದು ಸಮಾಧಾನ ಮಾಡಲು ಮುಂದಾಗಿದ್ದಾಳೆ.

ಆದರೆ ಕೋಪದ ಬರದಲ್ಲಿದ್ದ ಪತಿ ಇಮ್ತಿಯಾಜ್ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಕ್ಷಣಾರ್ಧದಲ್ಲಿ ಪತ್ನಿ ಮೈಮುನಾ (40) ದೇಹದೊಳಗೆ ಗುಂಡು ಹೊಕ್ಕಿದ್ದು,ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಂದೆ ಮಗನ ಜಗಳದಲ್ಲಿ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಮಗಳೂರು ಪೊಲೀಸರು ಆರೋಪಿ ತಂದೆ ಇಮ್ತಿಯಾಜ್ ಹಾಗೂ 17 ವರ್ಷದ ಮಗನನ್ನು ವಶಕ್ಕೆ ಪಡೆದಿದ್ದಾರೆ.
ಬಿಎಸ್ ವೈ ಇಲ್ಲದೇ ಬಿಜೆಪಿ ಇಲ್ಲ; ಬಿಜೆಪಿ ಇಲ್ಲದೇ ಬಿಎಸ್ ವೈ ಇಲ್ಲ; ವಿಜಯೇಂದ್ರ ಹೀಗೆ ಹೇಳಿದ್ದೇಕೆ?

Home add -Advt

Related Articles

Back to top button