ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಅದಾಗಲೇ ಮದುವೆಯಾಗಿ ಪತ್ನಿಯನ್ನು ಹೊಂದಿರುವ ಗ್ರಾಮ ಲೆಕ್ಕಿಗನ ಜೊತೆ ಎನ್.ಆರ್.ಪುರ ತಹಶೀಲ್ದಾರ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿರುವ ಘಟನೆ ನಡೆದಿದೆ.
ಗ್ರಾಮ ಲೆಕ್ಕಿಗನಾಗಿರುವ ವಿವಾಹಿತ ಶ್ರೀನಿಧಿ ಎಂಬುವವರ ಜೊತೆ ಎನ್.ಆರ್.ಪುರ ತಾಲೂಕಿನ ತಹಶೀಲ್ದಾರ್ ಗೀತಾ ಜುಲೈ 19ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈದೀಗ ವಿಷಯ ತಿಳಿದ ಶ್ರೀನಿಧಿ ಪತ್ನಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ನ್ಯಾಯಕ್ಕಾಗಿ ಕಣ್ಣೀರಿಟ್ಟಿದ್ದಾರೆ.
ತಹಶೀಲ್ದಾರ್ ಗೀತಾ ಅವರಿಗೆ 7 ದಿನಗಳಲ್ಲಿ ಉತ್ತರ ನಿಡುವಂತೆ ಜಿಲ್ಲಾಧಿಕಾರಿ ನೋಟೀಸ್ ಜಾರಿ ಮಾಡಿದ್ದಾರೆ.
ತಹಶೀಲ್ದಾರ್ ಗೀತಾ ಪತಿಯಿಂದ ವಿಚ್ಛೇಧನ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ರಿಜಿಸ್ಟರ್ ಮ್ಯಾರೇಜ್ ವೇಳೆ ಅವಿವಾಹಿತೆ ಎಂದು ತೋರಿಸಿದ್ದಾರೆ. ಅಲ್ಲದೇ ಗ್ರಾಮ ಲೆಕ್ಕಿಗ ಶ್ರೀನಿಧಿ ಮೊದಲ ಪತ್ನಿಯೊಂದಿಗೆ 2006ರಲ್ಲಿ ದಾವಣಗೆರೆಯಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ಆಕೆ ಬದುಕಿರುವಾಗಲೇ , ವಿಚ್ಛೇಧನವನ್ನೂ ಪಡೆಯದೇ ಇದೀಗ ಜುಲೈ 19ರಂದು ತಹಶೀಲ್ದಾರ್ ಗೀತಾ ಜೊತೆ ಮತ್ತೊಂದು ರಿಜಿಸ್ಟರ್ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪತಿ ಹತ್ಯೆಗೈದು ಬ್ಯಾಗ್ ನಲ್ಲಿ ತುಂಬಿಟ್ಟ ಪತ್ನಿ; ಎಡವಟ್ಟಿನಿಂದ ಸ್ಫೋಟಗೊಂಡ ಬ್ಯಾಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ