Kannada NewsKarnataka NewsLatest

*ಪ್ರತಿಷ್ಠಿತ ವಸತಿ ಶಾಲೆಯಲ್ಲಿ ಬೀಡುಬಿಟ್ಟ ಕಾಡಾನೆಗಳ ಹಿಂಡು; ವಿದ್ಯಾರ್ಥಿಗಳು ಕಂಗಾಲು*

ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ವಸತಿ ಶಾಲೆ ಆಂಬರ್ ವ್ಯಾಲಿ ಖಾಸಗಿ ಶಾಲೆಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಘಟನೆ ನಡೆದಿದೆ.

Home add -Advt

30 ಕಾಡಾನೆಗಳಿರುವ ದಂಡು ಬೀಡುಬಿಟ್ಟಿದ್ದು, ವಸತಿ ಶಾಲೆಯಲ್ಲಿರುವ ವಿದ್ಯಾರ್ಥಿಗಳು ಆತಂಕಕ್ಕೀಡಾಗಿದ್ದಾರೆ. ಶಿಕ್ಷಕರು, ಪೋಷಕರು ಆತಂಕಕ್ಕೀಡಾಗಿದ್ದಾರೆ. ಮುಂಜಾಗೃತಾ ಕ್ರಮವಾಗಿ ವಸತಿ ಶಾಲೆಯ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಕುಮ್ಕಿ ಆನೆಗಳನ್ನು ಬಳಸಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳ ಕಾರ್ಯಾಚರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಬರ್ ವ್ಯಾಲಿ ಶಾಲೆಯ ಸುತಮುತ್ತಲಿನ ಗ್ರಾಮಗಳಾದ ಮೂಗ್ತಿಹಳ್ಳಿ, ಕದ್ರಿಮಿದ್ರಿ, ರಾಂಪುರ, ನಲ್ಲೂರು ಸೇರಿದಂತೆ 9 ಗ್ರಾಮಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ.


Related Articles

Back to top button