32 ಕೋಟಿ ರೂ.ವೆಚ್ಚದಲ್ಲಿ ಚಿಕ್ಕೋಡಿ ನ್ಯಾಯಾಲಯ ಕಟ್ಟಡ: ಸಂಸದ ಅಣ್ಣಾಸಾಹೇಬ ಜೊಲ್ಲೆ ಶಂಕುಸ್ಥಾಪನೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ನೂತನವಾಗಿ ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ ೩೨ ಕೋಟಿ ರೂ.ಗಳ ಅಂದಾಜಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ನ್ಯಾಯಾಲಯ ಕಟ್ಟಡವನ್ನು ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಸೋಮವಾರ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡದ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿ, ಈ ನೂತನ ನ್ಯಾಯಾಲಯವು ಸಕಲ ಸೌಲಭ್ಯಗಳನ್ನು ಹೊಂದಿದ್ದು ಕಕ್ಷಿದಾರರಿಗೆ ಹಾಗೂ ನ್ಯಾಯವಾದಿಗಳಿಗೆ ಅನುಕೂಲವಾಗಲಿದೆ. ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿರುವುದರಿಂದ ನ್ಯಾಯವಾದಿಗಳಿಗೆ ತಾತ್ಪೂರ್ತಿಕ ಶೇಡ್‌ಗಳನ್ನು ನಿರ್ಮಿಸಲಾಗಿದೆ. ಆದರೆ ಮಳೆಗಾಲದಲ್ಲಿ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅನಾನುಕೂಲವಾಗಲಿದೆ. ಆದರಿಂದ ವಕೀಲರು ಕಟ್ಟಡ ನಿರ್ಮಾಣವಾಗುವವರಗೆ ಸಂಬಾಳಿಸಿಕೊಂಡು ಹೋಗಬೇಕೆಂದರು.
ನ್ಯಾಯವಾದಿಗಳಾದ ಎಚ್.ಎಸ್‌ನಸಲಾಪೂರೆ ಹಾಗೂ ಎಸ್.ಬಿ.ಉತ್ತುರೆ, ದಂಪತಿಗಳಿಂದ ಪೂಜೆ ನೇರವೇರಿತು.
ಚಿಕ್ಕೋಡಿ ಏಳನೆ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ.ನ್ಯಾಯಾಧೀಶರಾದ ಚಿದಾನಂದ ಬಡಿಗೇರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಕಲ್ಮೇಶ ಕಿವಡ ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ನಾಗೇಶ ಕಿವಡ.ಕಾರ್ಯದರ್ಶಿ ಎಲ್.ವಿ.ಬೋರನ್ನವರ. ಬಿ.ಆರ್.ಯಾಧವ. ಅಶೋಕ ಹರಗಾಪೂರೆ. ಬಿ.ಆರ್.ಕಮತೆ.ಎಂ.ಆರ್.ಬಾಕಳೆ, ಸುಭಾಸ ಯರಾನಾಳೆ ಇದ್ದರು.
ಚಿಕ್ಕೋಡಿ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನ್ಯಾಯಾಲಯದ ನೂತನ ಕಟ್ಟಡದ ನಿರ್ಮಾಣಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಎಸ್.ಎಲ್.ಚೌವ್ಹಾಣ, ಚಿದಾನಂದ ಬಡಿಗೇರ, ಕಲ್ಮೇಶ ಕಿವಡ, ನಾಗೇಶ ಕಿವಡ. ಎಚ್.ಎಸ್‌ನಸಲಾಪೂರೆ ಉಪಸ್ಥಿತರಿದ್ದರು.
https://pragati.taskdun.com/these-pictures-are-proof-that-prime-minister-narendra-modis-belgaum-road-show-is-unprecedented/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ