Belagavi NewsBelgaum NewsKarnataka News

*ಚಿಕ್ಕೋಡಿ ಘಟಕ ಅಸ್ತಿತ್ವಕ್ಕೆ: ಪದಾಧಿಕಾರಿಗಳ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಮೇ 26ರಂದು ಸೋಮವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವ‌‌ನದಲ್ಲಿ ನಡೆದ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ವಿಶೇಷ ಸಭೆಯಲ್ಲಿ ಚಿಕ್ಕೋಡಿ‌ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಗೌರವ ಅಧಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ನ್ಯೂಸ್ ಫಸ್ಟ್ ಹಿರಿಯ ವರದಿಗಾರ, ಅಧ್ಯಕ್ಷ : ಸಿದ್ದೇಶ ಪುಠಾಣಿ, ಪವರ್ ಟಿವಿ ವರದಿಗಾರ, ಉಪಾಧ್ಯಕ್ಷ: ಅಜಿತ್ ಸಣ್ಣಕ್ಕಿ, ಗ್ಯಾರಂಟಿ ನ್ಯೂಸ್ ವರದಿಗಾರ, ಪ್ರಧಾನ ಕಾರ್ಯದರ್ಶಿ: ಸಂಜೀವ ಅರಭಾವಿ, ಆರ್.ಕನ್ನಡ ವರದಿಗಾರ, ಸಹ ಕಾರ್ಯದರ್ಶಿ: ಸಂಜೀವ ಕೌಲಗಿ, ನ್ಯೂಸ್ ಫಸ್ಟ್ ವರದಿಗಾರ, ಖಜಾಂಚಿ: ದುರದುಂಡಯ್ಯ ಹಿರೇಮಠ, ಗ್ಯಾರಂಟಿ ನ್ಯೂಸ್ ವರದಿಗಾರ

ಇನ್ನಿತರ ಎಲ್ಲ ವರದಿಗಾರರು, ಕ್ಯಾಮರಾಮನ್ ಗಳು ಚಿಕ್ಕೋಡಿ ಘಟಕದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಎಲ್ಲರಿಗೂ ಅಭಿನಂದನೆಗಳು. 

ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಗೌರವಾಧ್ಯಕ್ಷ ಶ್ರೀಕಾಂತ ಕುಬಕಡ್ಡಿ, ಜಿಲ್ಲಾಧ್ಯಕ್ಷ ಮಂಜುನಾಥ ಪಾಟೀಲ್, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಸುಗಂಧಿ, ಸಹ ಕಾರ್ಯದರ್ಶಿ ಶ್ರೀಧರ ಕೊಟಾರಗಸ್ತಿ, ಸದಸ್ಯರಾದ ಸಂತೋಷ ಶ್ರೀರಾಮುಡು, ಸಹದೇವ ಮಾನೆ, ಮೈಲಾರಿ ಪಟಾತ, ಸಿದ್ದನಗೌಡ ಪಾಟೀಲ, ರಾಜೇಶ ಹೂಗಾರ, ಪ್ರಲ್ಹಾದ ಪೂಜಾರಿ, ಅಡಿವೆಪ್ಪ ಪಾಟೀಲ ಅವರ ಉಪಸ್ಥಿತಿಯಲ್ಲಿ ಚಿಕ್ಕೋಡಿ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಅಧ್ಯಕ್ಷರಾದ ಮಂಜುನಾಥ ಪಾಟೀಲ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button