Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಮೂರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕ: ಮರಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ ಪತಿ*

ಪ್ರಗತಿವಾಹಿನಿ ಸುದ್ದಿ: ಯುವಕನೊಬ್ಬ ಮೂರು ಮಕ್ಕಳ ತಾಯಿ ಹಿಂದೆ ಬಿದ್ದು, ಆಕೆಯ ಪತಿಯಿಂದ ಹಲ್ಲೆಗೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಯಕ್ಸಾಂಬಾ ಪಟ್ಟಣದ ಅಕ್ಷಯ್ ಕಲ್ಲಟಗಿ ಎಂಬ ಯುವಕ ವಿವಾಹಿತ ಮಹಿಳೆಯ ಹಿಂದೆ ಬಿದ್ದಿದ್ದ. ಮಹಿಳೆಗೆ ಮೂವರು ಮಕ್ಕಳು- ಪತಿ ಕೂಡ ಇದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ವಿವಾಹಿತ ಮಹಿಳೆಯ ಸಂಪರ್ಕದಲ್ಲಿದ್ದ ಯುವಕ ಆಗಾಗ ಮಹಿಳೆ ಭೇಟಿಯಾಗುತ್ತಿದ್ದ.

ನಿನ್ನೆ ರಾತ್ರಿ ಮಹಿಳೆ ಯುವಕನಿಗೆ ಭೇಟಿಯಾಗಲು ಬರುವಂತೆ ಕರೆ ಮಾಡಿದ್ದಳು, ಇದನ್ನು ನಂಬಿ ಆಕೆಯನ್ನು ಭೇಟಿಯಾಗಲು ಯುವಕ ಕರೋಶಿ ಗ್ರಾಮದತ್ತ ಹೋಗುತ್ತಿದ್ದ. ಈ ವೇಳೆ ಅರ್ಧ ದಾರಿಯಲ್ಲಿಯೇ ಯುವಕನನ್ನು ತಡೆದ ಮಹಿಳೆಯ ಪತಿ ಹಾಗೂ ಆತನ ಸಹೋದರ, ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಯುವಕ ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Home add -Advt


Related Articles

Back to top button