14 ಲಕ್ಷ ರೂ ಮೊತ್ತದಲ್ಲಿ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾದ ದಾಸೋಹದ ಕಟ್ಟಡ ಕಾಮಗಾರಿಗೆ ಜ್ಯೋತಿಪ್ರಸಾದ ಜೊಲ್ಲೆ ಚಾಲನೆ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಮುಜರಾಯಿ,ಹಜ್ ಮತ್ತು ವಕ್ಪ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಆರಾಧ್ಯದೈವ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾದ ದಾಸೋಹದ ಕಟ್ಟಡ ಕಾಮಗಾರಿಗೆ ಆಶಾಜ್ಯೋತಿ ಬುದ್ದಿ ಮಾಂಧ್ಯ ಮಕ್ಕಳ ಶಾಲೆಯ ಅಧ್ಯಕ್ಷರಾದ ಜ್ಯೋತಿಪ್ರಸಾದ ಜೊಲ್ಲೆಯವರು ಚಾಲನೆಯನ್ನು ನೀಡಿದರು.
ನಂತರ ಸ್ಥಳೀಯ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೋಸಾಯಿಟಿ ಅಧ್ಯಕ್ಷರಾದ ರೇವಯ್ಯಾ ಹಿರೇಮಠಯವರು ಮಾತನಾಡಿ ನಮ್ಮ ಗ್ರಾಮದ ಆರಾಧ್ಯದೈವ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ಒಂದು ದಾಸೋಹದ ಕಟ್ಟಡ ನಿರ್ಮಾಣವಾಗಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಬಳಿ ಮನವಿಯನ್ನು ಮಾಡಿಕೊಂಡಿದವು..ಆ ಮನವಿಗೆ ಸ್ಪಂದಿಸಿ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ದಾಸೋಹ ಕಟ್ಟಡ ಮಂಜೂರ ಮಾಡಿದ್ದಾರೆ. ಇವತ್ತು ಆ ಕಟ್ಟಡವನ್ನು ಜ್ಯೋತಿ ಪ್ರಸಾದ ಜೊಲ್ಲೆಯವರು ನೇತೃತ್ವದಲ್ಲಿ ಚಾಲನೆಯನ್ನು ನೀಡಿದ್ದೇವೆ ಎಂದರು.
ನಂತರ ಹಿರೇಕೋಡಿ ಗ್ರಾ.ಪಂ ಸದಸ್ಯ ಭರತ ದೇವಡಕರ ಮಾತನಾಡಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆಯವರ ಪ್ರಯತ್ನದಿಂದ ಹಜರತ್ ಬಾಬಾ ಬಿಲನ್ ಸಾಹೇಬ ದರ್ಗಾಕ್ಕೆ ದಾಸೋಹದ ಕಟ್ಟಡವನ್ನು ಮಂಜೂರು ಮಾಡಿದ್ದಾರೆ..ಇವತ್ತು ಈ ಕಾಮಗಾರಿಗೆ ಚಾಲನೆಯನ್ನು ನೀಡಿದ್ದೆವೆ ಎಂದರು.
ಈ ಸಂಧರ್ಭದಲ್ಲಿ ಬಾಬರ್ ಪಟೇಲ್,ಅನೀತಾ ದೇವಡಕರ,ಅನ್ಸಾರಿ ಮುಜಾವರ,ನಿಜಾಮ್ ಪಟೇಲ್,ರಾಜು ಬಾಳಿಕಾರಿ,ದಾದಾ ಪಟೇಲ್, ಸುಭಾಷ ಚೌಗಲಾ,ಅರವಿಂದ ಚೌಗಲಾ,ಶಬ್ಬಿರ ಗೌಂಡಿ,ಸಲಿ ಮುಜಾವರ,ನರಸಿಂಹ ದ್ರಾಕ್ಷೆ,ಅಣ್ಣಪ್ಪ ಮೊಳಕೆ,ಇಬ್ರಾಹಿಂ ಪಟೇಲ್, ಶಂಕರ ಮಾಯನ್ನವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು..
ಜನವರಿ 25ರೊಳಗೆ ಕೋವಿಡ್ ಕೇಸ್ ಮತ್ತಷ್ಟು ಉತ್ತುಂಗಕ್ಕೆ; ಸರ್ಕಾರಕ್ಕೆ ತಜ್ಞರ ಎಚ್ಚರಿಕೆ : ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ