CrimeKannada NewsKarnataka NewsLatest

*ಮಕ್ಕಳ ಆಯೋಗದ ಸದಸ್ಯನ ಕಾಮಕಾಂಡ ಬಯಲು; ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬ್ಲ್ಯಾಕ್ ಮೇಲ್*

ಆರೋಪಿ ಅರೆಸ್ಟ್

Home add -Advt


ಪ್ರಗತಿವಾಹಿನಿ ಸುದ್ದಿ: ಮಕ್ಕಳ ಆಯೋಗದ ಸದಸ್ಯನೊಬ್ಬ ನೊಂದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಸಹಾಯ ಮಾಡುವ ನೆಪದಲ್ಲಿ ಹತ್ತಿರವಾಗಿ ಬೆದರಿ ಲೈಂಗಿಕ ದೌರ್ಜನ್ಯವೆಸಗಿ, ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ತ ಮಹಿಳೆಯೊಬ್ಬರು ನೀಡಿದ ದೂರುಇನ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್.ಆರ್.ನಗರ ಠಾಣೆ ಪೊಲೀಸರು ರಾಮನಗರ ಮಕ್ಕಳ ಆಯೋಗದ ಸದಸ್ಯ ಚಂದ್ರೇಗೌಡನನ್ನು ಬಂಧಿಸಿದ್ದಾರೆ. ಚಂದ್ರೇಗೌಡನ ವಿರುದ್ಧ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ್, ಬ್ಲ್ಯಾಅಕ್ ಮೇಲ್ ಮಾಡಿದ ಆರೋಪ ಹಾಗೂ ವಕೀಲ, ಲೆಕ್ಚರ್, ವರದಿಗಾರನೆಂದು ನಕಲಿ ಐಡಿ ಕಾರ್ಡ್ ಮಾಡಿಕೊಂಡು ವಂಚಿಸಿದ ಆರೋಪ ಕೇಳಿಬಂದಿದೆ.

ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿರುವ ಚಂದ್ರೇಗೌಡನದ್ದು ಮಹಿಳೆಯರಿಗೆ ಮೋಸ, ಅಮಾಯಕರಿಗೆ ಬೆದರಿಕೆ ಹಾಕಿ ವಸೂಲಿ ಮಾಡುವುದನ್ನೇ ಕಾರಯಕವನ್ನಾಗಿ ಮಾಡಿಕೊಂಡಿದ್ದಾನೆ ಎಂಬುದು ಬಯಲಾಗಿದೆ.

ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದ ಮಹಿಳೆಗೆ ತಾನು ಕಾಲೇಜು ಲೆಕ್ಚರ್ ಎಂದು ಪರಿಚಯಿಸಿಕೊಂಡಿದ್ದ ಚಂದ್ರೇಗೌಡ, ತಾನೂ ಪತ್ನಿಗೆ ವಿಚ್ಛೇದನ ನೀಡಿದ್ದೇನೆ. ನಿಮ್ಮನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದ. ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಲೈಂಗಿಕ ಸಂಬಂಧವನ್ನು ಹೊಂದಿದ್ದಲ್ಲದೇ ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ 5 ಲಕ್ಷ ಹಣ ಪಡೆದುಕೊಂಡಿದ್ದನಂತೆ. ಸಂತ್ರಸ್ತ ಮಹಿಳೆ ಒಮ್ಮೊ ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದಾಗ ಆತನ ಮೊಬೈಲ್ ನಲ್ಲಿ 20ಕೂ ಹೆಚ್ಚು ಮಹಿಳೆಯರ ಫೋಟೋ, ವಿಡಿಯೋಗಳಿರುವುದು ಗೊತಾಗಿ ಶಾಕ್ ಆಗಿದೆ. ಆತನ ಬಗ್ಗೆ ವಿಚಾರಿಸುದಾಗ ಆತ ಇದೇ ರೀತಿ ಕಥೆ ಹೇಳಿ ಹಲವು ಮಹಿಳೆಯರಿಗೆ ಮೋಸ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


Related Articles

Back to top button