Kannada NewsKarnataka NewsLatestPolitics

*ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಪೂರ್ವಭಾವಿ ಸಭೆ*

ಪ್ರಗತಿವಾಹಿನಿ ಸುದ್ದಿ: ಜನರ ಮಡಿಲಲ್ಲಿ ಬಿ.ಎಸ್.ವೈ ಸಾರ್ಥಕ 50 ವರ್ಷ ಅಭಿಮಾನೋತ್ಸವ ಸಮಾರಂಭವು ದಿನಾಂಕ: 09 ಮೇ 2026ರಂದು ನಡೆಯಲಿದ್ದು, ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ತುಮಕೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ನಾಯಕರಾದ ಗೋವಿಂದ ಕಾರಜೋಳ, ಮಹಾಲಕ್ಷ್ಮೀ ಲೇಔಟ್‌ ಶಾಸಕರಾದ ಕೆ.ಗೋಪಾಲಯ್ಯ ರವರು ಭಾಗವಹಿಸಿದ್ದರು.

ಶಾಸಕ ಗೋಪಾಲಯ್ಯರವರು ಮಾತನಾಡುತ್ತಾ ನಮ್ಮ ನಾಯಕರಾದ ಯಡಿಯೂರಪ್ಪನವರ ಹೆಸರು ರಾಜ್ಯ ರಾಜಕಾರಣ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಮೂಡಿದೆ. 50 ವರ್ಷಗಳ ಅವರ ಹೋರಾಟ, ಜನಸೇವೆ ಹಾಗೂ ಜನಾಡಳಿತ ಜನಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಈ ಅಭಿಮಾನೋತ್ಸವ ಸಮಾರಂಭವು ಬಹಳ ಅರ್ಥಪೂರ್ಣವಾಗಿದೆ. ನಾವೆಲ್ಲರೂ ಸೇರಿ ಈ ಸಮಾರಂಭವನ್ನು ಯಶಸ್ವಿಗೊಳಿಸೋಣ ಎಂದರು. ಪ್ರೀತಂಗೌಡ, ಎಂ.ಡಿ.ಲಕ್ಷ್ಮೀನಾರಾಯಣ ಹಾಗೂ ತುಮಕೂರಿನ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button