CrimeHealthKannada NewsLatestNational

*ಕೆಮ್ಮಿನ ಸಿರಪ್ ನಿಂದ ಮಕ್ಕಳ ಸಾವು ಪ್ರಕರಣ: ಔಷಧಿ ಕಂಪನಿ ಮಾಲೀಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಕೇಸ್ ನಲ್ಲಿ ಚೆನ್ನೈನಲ್ಲಿ ಕೆಮ್ಮಿನ ಸಿರಪ್ ಕಂಪನಿಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.

ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ 1940 ರ ಸೆಕ್ಷನ್ 17 A ಉಲ್ಲಂಘನೆಗಾಗಿ ಔಷಧಿ ಕಂಪನಿ ಮಾಲೀಕನ ಬಂಧನವಾಗಿದೆ.

ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಈವರೆಗೂ 20 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯೋಪ್ರವೃತ್ತರಾದ ಪೊಲೀಸರು ಔಷಧಿ ಕಂಪನಿ ಮಾಲೀಕನನ್ನು ಚೆನ್ನೈನಲ್ಲಿ Sresan ಫಾರ್ಮಾಸಿಟಿಕಲ್ಸ್ ನ ಜಿ. ರಂಗನಾಥನ್ ಅವರನ್ನು ಬಂಧಿಸಿದ್ದಾರೆ.

73 ವರ್ಷದ ರಂಗನಾಥ್, ಮದ್ರಾಸ್ ಮೆಡಿಕಲ್ ಕಾಲೇಜಿನ ಪದವೀಧರನಾಗಿದ್ದು, 40ವರ್ಷಗಳಿಂದ ಔಷಧ ಸಂಶೋಧನೆ ವಲಯದಲ್ಲಿ ಹೆಸರುವಾಸಿಯಾಗಿದ್ದಾರೆ. ಮಕ್ಕಳ ಸಿರಪ್ ಸರಬರಾಜು ಮಾಡಿದ್ದ ಕಂಪನಿಯ ಔಷಧಿ ತಯಾರಿಕೆ ಹಿಂದೆ ರಂಗನಾಥ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಗೊತ್ತಾಗಿದೆ.

Home add -Advt

Related Articles

Back to top button