
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯಲಿದ್ದ ಅಪ್ತಾಪ್ತ ಬಾಲಕಿಯ ವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಡೆದರು.
ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ 16 ವರ್ಷ 7 ತಿಂಗಳು ವಯಸ್ಸಿನ ಬಾಲಕಿಯ
ವಿವಾಹವನ್ನು ಹೆಬ್ಬಾಳ ಗ್ರಾಮದ 28 ವರ್ಷ ವಯಸ್ಸಿನ ಯುವಕನ ಜೊತೆ
ಮಂಗಳವಾರ ನಿಗದಿಯಾಗಿತ್ತು.
ಮದುವೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡು ಇನ್ನೇನು ಅಕ್ಷತಾರೋಪಣ ನಡೆಯುವುದರಲ್ಲಿತ್ತು. ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಮದುವೆ ನಡೆಯಬೇಕಿದ್ದ ಸ್ಥಳಕ್ಕೆ ಧಾವಿಸಿದರು.
ಪಿಡಿಒ, ಅಂಗನವಾಡಿ ಸಿಬ್ಬಂದಿ, ಗ್ರಾಮ ಲೆಕ್ಕಿಗ, ಪೊಲೀಸರು ಮತ್ತು ಇತರರು ತೆರಳಿ ಮದುವೆಯನ್ನು ತಡೆದು ಬಾಲಕಿಯನ್ನು ರಕ್ಷಿಸಿದರು. ಬಳಿಕ ಬಾಲಕಿಯ ಪಾಲಕರಿಂದ ತಮ್ಮ ಮಗಳಿಗೆ 18 ವರ್ಷ
ಪೂರ್ಣಗೊಳ್ಳುವವರೆಗೆ ಮದುವೆಯನ್ನು ಮಾಡುವುದಿಲ್ಲ ಎಂದು ಮುಚ್ಚಳಿಕೆಯನ್ನು
ಬರೆಸಿಕೊಂಡು ಬಾಲಕಿಯನ್ನು ಹೆತ್ತವರ ವಶಕ್ಕೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ
ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ.
ಹಸುಳೆಯ ಅನಾರೋಗ್ಯ: ಎರಡೇ ಗಂಟೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಿದ ಸಿಎಂ ಬೊಮ್ಮಾಯಿ