Kannada NewsKarnataka NewsLatest

ಖಾನಾಪುರ: ಅಮಾವಾಸ್ಯೆ ಪೂಜೆ ಲಿಂಬೆಹಣ್ಣು ದಾಟಿಸುವಾಗ ಲಾರಿ ಚಕ್ರಕ್ಕೆ ಬಾಲಕ ಬಲಿ

 ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅಮವಾಸ್ಯೆ ಪೂಜೆ ಮುಗಿಸಿದ ಬಳಿಕ ಚಕ್ರಗಳಿಗೆ ಇರಿಸಿದ ಲಿಂಬೆ ಹಣ್ಣು ದಾಟಿಸಲು ಮುಂದೆ ಚಲಿಸಿದ ಲಾರಿಯ ಚಕ್ರದಡಿ ಆಟವಾಡುತ್ತಿದ್ದ ಐದು ವರ್ಷದ ಬಾಲಕ
ಸಿಲುಕಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಪ್ರಭುನಗರ
ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಆದರ್ಶ ರಮೇಶ ಹರಿಜನ ಮೃತ ಬಾಲಕ.
ಅಮವಾಸ್ಯೆ ಪೂಜೆ ಮುಗಿದ ಬಳಿಕ ಆದರ್ಶನ ಸೋದರ ಸಂಬಂಧಿ ಲಾರಿಯನ್ನು ಕೆಲ ಅಡಿಗಳಷ್ಟು
ಮುಂದೆ ಚಲಾಯಿಸುತ್ತಿದ್ದ ಸಂದರ್ಭದಲ್ಲಿ ಲಾರಿಯ ಬಳಿ ಆಟವಾಡುತ್ತಿದ್ದ ಬಾಲಕ ಆದರ್ಶನ
ಮೇಲೆ ಲಾರಿ ಹರಿದಿದ್ದರಿಂದ ಆತ ಮೃತಪಟ್ಟಿದ್ದಾನೆ.

Home add -Advt

ಬಾಲಕನ ಮರಣೋತ್ತರ ಪರೀಕ್ಷೆಯನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೆರವೇರಿಸಿದ ಬಳಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ್ದ ಮಹಿಳಾ ಪಿಎಸ್ ಐ ಕೊರೊನಾಗೆ ಬಲಿ

Related Articles

Back to top button