ಪ್ರಗತಿವಾಹಿನಿ ಸುದ್ದಿ: ಒಂದುವರೆ ವರ್ಷದ ಮಗು ನೀರಿನ ಸಂಪಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಸಿಣ್ಣೇನಹಳ್ಳಿ ರಸ್ತೆಯ ಸಾಯಿ ಸೆರಿನಿಟಿ ಲೇಔಟ್ ನಲ್ಲಿ ನಡೆದಿದೆ.
ಉತ್ತರ ಭಾರತ ಮೂಲದ ದಂಪತಿಯ ಮಗು ರಾಜಕುಮಾರ್ ಮೃತ ಮಗು. ಕೂಲಿ ಕೆಲಸ ಮಾಡಿಕೊಂಡು ದಂಪತಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ಸಂಪ್ ನಲ್ಲಿ ಬಿದ್ದು ಮಗು ಮೃತಪಟ್ಟಿದೆ.
ಎರಡು ದಿನಗಳ ಹಿಂದಷ್ಟೇ 5 ವರ್ಷದ ಬಾಲಕ ನೀರಿನ ಸಂಪ್ ಗೆ ಬಿದ್ದು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ