Kannada NewsKarnataka NewsLatest

ಎರಡು ಡೋಸ್ ಪಡೆದಿದ್ದರೂ ಹುಕ್ಕೇರಿ ಮೂಲದ ಮಂಗಳೂರು ಪೊಲೀಸ್ ಬಲಿ

ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಎರಡು ಡೋಸ್ ಲಸಿಕೆ ಪಡೆದಿದ್ದ ಮಂಗಳೂರಿನ ಪೊಲೀಸ್ ಸಿಬ್ಬಂದಿ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ.
ಮಂಗಳೂರು ಮೀಸಲು ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದಪ್ಪ ಶಿಂಗೆ ಮೃತಪಟ್ಟವರು.
ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇವರು ಮಾಜಿ ಸೈನಿಕರು. ಕೊರೊನಾ ಪಾಸಿಟಿವ್ ಬಂದಿದ್ದ ಇವರು ಕಳೆದ ಎರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹುಅಂಗಾಂಗ ವೈಫಲ್ಯಗೊಂಡು ಬಳಲುತ್ತಿದ್ದ ಇವರು ಎರಡು ಡೋಸ್ ಲಸಿಕೆಯನ್ನು ಪಡೆದಿದ್ದರು.
ಇವರ ಸಾವಿಗೆ ಕೊರೋನಾ ಒಂದೇ ಕಾರಣವಾಗಿರಲಿಕ್ಕಿಲ್ಲ ಎನ್ನುವ ವಾದವೂ ಇದೆ. ಹಾಗಾಗಿ ಲಸಿಕೆ ಬಗ್ಗೆ ಯಾವುದೇ ಸಂಶಯ ವ್ಯಕ್ತಪಡಿಸುವುದು ಸಮಂಜಸವೆನಿಸುವುದಿಲ್ಲ.

Related Articles

Back to top button