GIT add 2024-1
Beereshwara 33

*ನಾಟಕದಲ್ಲಿ ರಾಕ್ಷಸ ಸಂಹಾರ ಸನ್ನಿವೇಶದ ವೇಳೆ ದುರಂತ: ರಾಕ್ಷಸ ಪಾತ್ರಧಾರಿ ಬಾಲಕನ ಕತ್ತು ಸೀಳಿದ ಕಾಳಿ ಪಾತ್ರಧಾರಿ ಬಾಲಕ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಪೌರಾಣಿಕ ನಾಟಕ ಪ್ರದರ್ಶನದ ವೇಳೆ ಕಾಳಿಧಾರಿಯ ಪಾತ್ರಧಾರಿಯೊಬ್ಬ ನಿಜವಾಗಿಯೂ ರಾಕ್ಷಸ ಪಾತ್ರಧಾರಿಯನ್ನು ಸಂಹಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಅಕ್ಕಪಕ್ಕದ ಮಕ್ಕಳೆಲ್ಲರೂ ಸೇರಿ ಪೌರಾಣಿಕ ಸನ್ನಿವೇಶದ ನಾಟಕವಾಡುತ್ತಿದ್ದರು, 14 ವರ್ಷದ ಬಾಲಕ ಕಾಳಿದೇವಿ ಪಾತ್ರಧಾರಿಯಾಗಿದ್ದು, ರಾಕ್ಷಸ ಪಾತ್ರಧಾರಿಯಾಗಿದ್ದ 11 ವರ್ಷದ ಬಾಲಕನ ಕತ್ತು ಸೀಳಿದ್ದಾನೆ.

Emergency Service

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು 14 ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕಾನ್ಪುರದ ಬಿಲಹೌರ್ ಪ್ರದೇಶದ ಬಂಬಿಯಾನ್ ಪುರದ ಗ್ರಾಮದ ಸುಭಾಷ ಸೈನಿ ನಿವಾಸದಲ್ಲಿ ಭಗವತ್ ಕಥಾನಕ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಕ್ಕಳು ಭಗವತ್ ಕಥಾನಕದ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಕಾಳಿ ಪಾತ್ರಧಾರಿ ಬಾಲಕನಿಗೆ ತ್ರಿಶೂಲ ಸಿಕ್ಕಿಲ್ಲವೆಂದು ಚಾಕುವನ್ನೇ ಆಯುಧವಾಗಿ ಹಿಡಿದಿದ್ದ. ರಾಕ್ಷಸ ಪಾತ್ರಧಾನಿ ಕಾಳಿದೇವಿಯ ಕಾಲಿಗೆರಗಿದಾಗ ರಾಕ್ಷಸ ಸಂಹಾರ ಸನ್ನಿವೇಶ ನಿರ್ವಹಿಸುವ ಭರದಲ್ಲಿ ಚಾಕುವಿನಿಂದ ಪಾತ್ರಧಾರಿ ಬಾಲಕನ ಕತ್ತು ಸೀಳಿದ್ದಾನೆ.

ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಷ್ಟರಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ.

Laxmi Tai add
Bottom Add3
Bottom Ad 2