Latest

ಜನರ ಮೇಲೆ ಹರಿದ ಕಾರು; ಶಾಸಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ; ಖುರ್ದು: ಶಾಸಕರೊಬ್ಬರ ಕಾರು ಹರಿದು ಪೊಲೀಸರು ಸೇರಿದಂತೆ 10ಕ್ಕೂ ಜನರು ಗಂಭೀರವಾಗಿ ಗಾಯಗೊಂಡಿದ್ದು, ಶಾಸಕರನ್ನೇ ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಓಡಿಶಾದಲ್ಲಿ ನಡೆದಿದೆ.

ಓಡಿಶಾದ ಖರ್ದು ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಚಿಲಿಕಾ ಕ್ಷೇತ್ರದ ಬಿಜೆಡಿ-ಬಿಜು ಜನತಾದಳ ಶಾಸಕ ಪ್ರಶಾಂತ್ ಜಗದೇವ್ ಎಂಬುವವರು ಜನರ ಮೇಲೆ ಕಾರು ಹರಿಸಿದ್ದಾರೆ. ಇದರಿಂದಾಗಿ ಪೊಲೀಸರು ಸೇರಿದಂತೆ 10ಕ್ಕೂ ಜನರು ಗಾಯಗೊಂಡಿದ್ದು, ಉದ್ರಿಕ್ತಗೊಂಡ ಜನರು ಶಾಸಕರಿಗೆ ಹೊಡೆದಿದ್ದಾರೆ.

Home add -Advt

ಪಂಚಾಯತ್ ಚುನಾವಣೆಗಾಗಿ ನಡೆದಿದ್ದ ರ್ಯಾಲಿ ವೇಳೆ ಜನಸಂದಣಿಯಲ್ಲಿ ಸಿಲುಕಿದ್ದ ಶಾಸಕರು ತಮ್ಮ ಕಾರನ್ನು ಜನರ ಮೇಲೆಯೇ ಚಲಾಯಿಸಿಸಿಕೊಂಡು ಹೋಗಿದ್ದಾರೆ. ಕಾರನ್ನು ಅಡ್ಡಗಟ್ಟಿದ ಗ್ರಾಮಸ್ಥರು, ಶಾಸಕ ಪ್ರಶಾಂತ್ ಜಗದೇವ್ ಅವರನ್ನು ಕಾರಿನಿಂದ ಇಳಿಸಿ, ಥಳಿಸಿದ್ದಾರೆ. ಗ್ರಾಮಸ್ಥರಿಂದ ಬಿದ್ದ ಏಟಿಗೆ ಶಾಸಕರು ಗಾಯಗೊಂಡಿದ್ದು, ಪೊಲೀಸರು ಶಾಸಕರನ್ನು ರಕ್ಷಿಸಿ, ಜನರನ್ನು ನಿಯಂತ್ರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

2 ಕ್ಷೇತ್ರಗಳಿಂದ ಸಿಎಂ ಬೊಮ್ಮಾಯಿ ಕಣಕ್ಕೆ

Related Articles

Back to top button