Kannada NewsLatest
*ನಗ್ನಳಾಗಿ ಮಲಗಿದ್ದಾಗ ಕಿಟಕಿ ಕ್ಲೀನ್ ಮಾಡುವ ಕಾರ್ಮಿಕರು ನೋಡಿದ್ದಕ್ಕೆ ಖಿನ್ನತೆಗೊಳಾಗದ ಮಹಿಳೆ: ಪರಿಹಾರಕ್ಕೆ ಮನವಿ*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬರು ತನ್ನ ಕೋಣೆಯಲ್ಲಿ ನಗ್ನಳಾಗಿ ಮಲಗಿದ್ದಾಗ ಕಟ್ಟಡದ ಕಿಟಕಿ ಸ್ವಚ್ಛಗೊಳಿಸುವ ಕಾರ್ಮಿಕರಿಬ್ಬರು ಮಹಿಳೆಯನ್ನು ನೋಡಿದ್ದರಿಂದ ಮಹಿಳೆ ಖಿನ್ನತೆಗೆ ಒಳಗಾಗಿದ್ದು, ಪರಿಹಾರ ನೀಡುವಂತೆ ಒತ್ತಾಯಿಸಿರುವ ಘಟನೆ ನಡೆದಿದೆ.
ಚೀನಾದಲ್ಲಿ ಈ ಘಟನೆ ನಡೆದಿದು, ಚೀನಾ ಮಹಿಳೆಯೊಬ್ಬರು ತಾನು ಬೆತ್ತಲಾಗಿ ಮನೆಯ ಕೋಣೆಯಲ್ಲಿ ಮಲಗಿದ್ದಾಗ ಕಟ್ಟಡದ ಕಿಟಕಿ ಸ್ವಚ್ಛಗೊಳಿಸುವ ಇಬ್ಬರು ಕಾರ್ಮಿಕರು ತನ್ನನ್ನು ನೋಡಿದ್ದರಿಂದ ತಾನು ಖಿನ್ನತೆಗೆ ಒಳಗಾಗಿದ್ದೇನೆ. ಈ ಘಟನೆ ಬಗ್ಗೆ ಪ್ರಾಪರ್ಟಿ ಮೆಂಟೇನೆನ್ಸ್ ಕಂಪನಿ ಕ್ಷಮೆ ಕೋರಬೇಕು ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಮಹಿಳೆ ಹಾಗೂ ಆಕೆಯ ಪತಿ ಒತ್ತಾಯಿಸಿದ್ದಾರೆ.