ಪ್ರಗತಿವಾಹಿನಿ ಸುದ್ದಿ; ವಾಷಿಂಗ್ಟನ್: ಭಾರತದ ಗಡಿಯಲ್ಲಿ ಚೀನಾ 60000 ಸೈನಿಕರನ್ನು ನಿಯೋಜಿಸಿದೆ ಎಂದು ಯುಎಸ್ ಸ್ಟೇಟ್ ಸಕ್ರೆಟರಿ ಮೈಕ್ ಪೆಂಪಿಯೊ ತಿಳಿಸಿದ್ದಾರೆ.
ನಾಳೆ ಭಾರತ-ಚೀನಾ ನಡುವೆ ಗಡಿವಿವಾದ ಬಗೆ ಹರಿಸುವ ನಿಟ್ಟಿನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಈ ಬೆಳವಣಿಗೆ ಮಧ್ಯೆಯೇ ಚೀನಾ ಎಲ್ ಎಸಿಯಲ್ಲಿ 60000 ಸೈನಿಕರ ನಿಯೋಜನೆ ಮಾಡಿದೆ ಎಂದು ಅಮೆರಿಕ ಹೇಳಿದೆ.
ಈ ನಡುವೆ ಇಂದು ಸೇನಾ ಸಿಬ್ಬಂದಿ ಮುಖಸ್ಥ ಬಿಪಿನ್ ರಾವತ್ ಗಡಿಯಲ್ಲಿನ ಮುಂಚೂಣಿ ಸೇನಾನೆಲೆಗಳಿಗೆ ಭೇಟಿ ನೀಡಲಿದ್ದು, ಲೆಫ್ಟಿನೆಂಟ್ ಜನರಲ್ ಜೋಶಿ ಸೇರಿದಂತೆ ಹಲವರ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ