ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಆರ್ಥಿಕವಾಗಿ ದಿವಾಳಿಯಾಗಿರುವ ಭಾರತದ ನೆರೆಯ ರಾಷ್ಟ್ರಗಳಿಗೆ ಚೀನಾ ಸಾಲ ನೀಡುವ ಮೂಲಕ ಆ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿರುವ ಅಮೆರಿಕ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ಆರ್ಥಿಕವಾಗಿ ದಿವಾಳಿಯೆದ್ದು ನೆಲಕಚ್ಚಿರುವ ಪಾಕಿಸ್ತಾನಕ್ಕೆ, ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೇ ನಿರಾಕರಿಸಿದೆ. ಹೀಗಿರುವಾಗ ಪರಿಸ್ಥಿತಿಯ ಲಾಭ ಪಡೆಯಲು ಚೀನಾ ಸುಮಾರು 700 ಮಿಲಿಯನ್ ಡಾಲರ್ ಸಹಾಯ ಮಾಡಲು ಮುಂದಾಗಿದೆ.
ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಕ್ಕೆ ಚೀನಾ ಸಾಲ ನೀಡುತ್ತಿದೆ. ಈ ಮೂಲಕ ಈ ಎಲ್ಲ ರಾಷ್ಟ್ರಗಳನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವುದು ಚೀನಾದ ಚಾಣಾಕ್ಷ ಯೋಜನೆ ಎಂದು ದಕ್ಷಿಣ ಹಾಗೂ ಮಧ್ಯ ಏಷ್ಯಾಗೂ ಸಹ ಕಾರ್ಯದರ್ಶಿಯಾಗಿರುವ ಡೊನಾಲ್ಡ್ ಲು ಹೇಳಿದ್ದಾರೆ.
ಈ ದೇಶಗಳು ತಮ್ಮದೇ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಹಾಗೂ ಹೊರಗಿನ ಯಾವುದೇ ಪಾಲುದಾರರ ಬಲವಂತಕ್ಕೆ ಒಳಗಾಗದೇ ಇರುವ ನಿಟ್ಟಿನಲ್ಲಿ
ಅವರಿಗೆ ಸಹಾಯ ಮಾಡುವ ಕುರಿತು ಭಾರತದೊಂದಿಗೆ ಮಾತುಕತೆ ನಡೆಸುವುದಾಗಿ ಲು ಹೇಳಿದ್ದಾರೆ.
ಮಾರ್ಚ್ 1 ರಿಂದ 3ರ ವರೆಗೆ ಲು ಅವರು ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಭಾರತ ದೊಂದಿಗೆ ಚೀನಾ ಸಂಬಂಧ ಕುರಿತು ಚರ್ಚೆಗಳು ನಡೆದಿವೆ ಎಂದು ಸಹ ಲು ಹೇಳಿದ್ದಾರೆ.
ಪ್ರಧಾನಿ ಕಾರ್ಯಕ್ರಮಕ್ಕೆ ಕೈಚೀಲ, ನೀರಿನ ಬಾಟಲ್, ಎಲೆಕ್ಟ್ರಾನಿಕ್ ವಸ್ತು ತರುವಂತಿಲ್ಲ
https://pragati.taskdun.com/hand-bags-water-bottles-and-electronic-items-cannot-be-brought-to-the-prime-ministers-program/
*ಲಿಫ್ಟ್ ಗಾಗಿ ತೆಗೆದಿದ್ದ ಹೊಂಡಕ್ಕೆ ಬಿದ್ದ ಮಗು; ದಾರುಣ ಸಾವು*
https://pragati.taskdun.com/6-yers-girldeathlift-pitbangalore/
ಮುಖ್ಯಮಂತ್ರಿ ಭದ್ರತಾ ಪೊಲೀಸ್ ಅಧಿಕಾರಿ ಆಕಸ್ಮಿಕ ಗುಂಡಿಗೆ ಬಲಿ
https://pragati.taskdun.com/up-chief-ministers-security-police-officer-killed-in-accidental-firing/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ