ಜೈನ ಧರ್ವಿುಯ ಮುನಿಗಳು ಕೈಗೊಳ್ಳುವ ಅತ್ಯಂತ ಕಠಿಣವಾಗಿರುವ ವೃತ ಯಮಸಲ್ಲೇಖನ ವ್ರತ. ಜೈನಧರ್ಮದ ಪುರಾಣಗಳ ಪ್ರಕಾರ ಪ್ರತೀಕಾರವಿಲ್ಲದ ಉಪಸರ್ಗವಾಗಲೀ, ಮುದಿತನವಾಗಲೀ ಅಥವಾ ರೋಗವಾಗಲೀ ಬಂದ ಬಳಿಕ ಜೈನ ಮುನಿಗಳು ಮೋಕ್ಷ ಅಥವಾ ಸದ್ಗತಿಗಾಗಿ ಶರೀರ ತ್ಯಾಗಮಾಡುವುದಕ್ಕಾಗಿ ಯಮ ಸಲ್ಲೇಖನ ವ್ರತದ ನಿರ್ಧಾರ ಕೈಗೊಳ್ಳುತ್ತಾರೆ.
ಮೂಲತಃ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜನಿಸಿರುವ ಚಿನ್ಮಯಸಾಗರಜೀ ಮಹಾರಾಜರು, ಜೈನ ಧರ್ಮದ ಅಹಿಂಸಾ ತತ್ತ್ವಳಿಗೆ ಆಕರ್ಷಿತರಾಗಿ 33 ವರ್ಷಗಳ ಹಿಂದೆ 31-3-1988 ರಂದು ಸೋನಾಗಿರಿಯಲ್ಲಿ ಅವರಿಂದ ಮುನಿ ದೀಕ್ಷೆ ಪಡೆದುಕೊಂಡಿದ್ದರು.
ಬಳಿಕ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ತಲಾ 2 ವರ್ಷ ಹಾಗೂ ಮಧ್ಯಪ್ರದೇಶದಲ್ಲಿ 15 ವರ್ಷ, ಛತ್ತಿಸಘಡದಲ್ಲಿ 2 ವರ್ಷ, ಮಹಾರಾಷ್ಟ್ರ ಮತ್ತು ಕರ್ನಾಟಕ ತಲಾ 5 ವರ್ಷಗಳ ಕಾಲ ಆದಿವಾಸಿಗಳ ಮತ್ತು ಸಮಾಜದ ವಿವಿಧ ಸಮುದಾಯದ ಜನತೆಯಲ್ಲಿ ಅಹಿಂಸಾ ತತ್ತ್ವಗಳನ್ನು ಬೋಧಿಸುವುದರ ಜೊತೆ, ದುಶ್ಚಟಗಳಿಂದ ಮುಕ್ತಿ ಕೊಡಿಸುವುದಕ್ಕಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಆದಿವಾಸಿಗಳನ್ನು ದುಶ್ಚಟದಿಂದ ಮುಕ್ತಗೊಳಿಸಿರುವುದಕ್ಕಾಗಿ ಅಮೇರಿಕೆ ವಿಶ್ವವಿದ್ಯಾಲಯವೊಂದು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ, ಛತ್ತಿಸಗಢದಲ್ಲಿ ಹಿಂದುಳಿದ ವರ್ಗದ ಜನತೆ ಸ್ವಾವಲಂಬಿ ಜೀವನ ಸಾಗಿಸುವುದಕ್ಕಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಚಿನ್ಮಯಸಾಗರಜಿ ಮಹಾರಾಜರು ಟ್ರಸ್ಟವೊಂದನ್ನು ಸ್ಥಾಪಿಸಿ, ಅದರ ಮೂಲಕ ಸಹಸ್ರಾರು ಜನತೆ ಬದುಕಿಗೆ ಬೆಳಕಾಗಿದ್ದಾರೆ. ರಾಷ್ಟ್ರಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಅವರು ಹೊಂದಿದ್ದರು.
ಯಮ ಸಲ್ಲೇಖನ ವೃತ ಘೊಷಣೆ ಮಾಡಿದ ರಾಷ್ಟ್ರಸಂತ ಚಿನ್ಮಯಸಾಗರಜಿ ಮಹಾರಾಜ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ