ಪ್ರಗತಿವಾಹಿನಿ ಸುದ್ದಿ, ಇಚಲಕರಂಜಿ –ಮಹಾರಾಷ್ಟ್ರದಲ್ಲಿ ಜರುಗಲಿರುವ ವಿಧಾನಸಭಾ ಚುನಾವಣೆಯ ಪ್ರಚಾರ ನಿಮಿತ್ತವಾಗಿ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ ಹಾಗೂ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಇಂಚಲಕರಂಜಿಯ ಬಿಜೆಪಿ ಅಧಿಕೃತ ಅಭ್ಯರ್ಥಿ ಸುರೇಶ ಹಲವಂಕರ್ ಅವರ ಪರವಾಗಿ ಕಬನೂರ, ಚಂದೂರ, ತಾರದಾಳ, ಲಿಂಗನಗುಡಿ, ನಾಗುಮಳಾ ಮೊದಲಾದ ಗ್ರಾಮಗಳಲ್ಲಿ ಪ್ರಚಾರದಲ್ಲಿ ನಡೆಸಿದರು.
ಇದೇ ಸಂದರ್ಭದಲ್ಲಿ ಅಲ್ಲಿನ ಲಿಂಗಾಯತ ಸಮಾಜದ ಅನೇಕ ಧುರೀಣರನ್ನು ಭೇಟಿ ಮಾಡಿದರು. ಇಂಚಲಕರಂಜಿಯ ತಾರದಾಳ ಗ್ರಾಮಸ್ಥರು ಡಾ.ಪ್ರಭಾಕರ ಕೋರೆಯವರನ್ನು ಅಭಿನಂದಿಸುತ್ತ ’ಡಾ.ಪ್ರಭಾಕರ ಕೋರೆಯವರು ತಮ್ಮ ಆಸ್ಪತ್ರೆಯ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಬಡವರ ಬಗ್ಗೆ ಅವರಿಗಿರುವ ಕಾಳಜಿ ಅಪಾರವಾದುದು. ಇಂದು ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಈ ಗ್ರಾಮದ ಹಲವಾರು ಬಡ ಜನರಿಗೆ ಚಿಕಿತ್ಸೆ ದೊರೆಯದೇ ಹೋಗಿದ್ದರೆ ಕುಟುಂಬಗಳು ಬೀದಿಗೆ ಬರುತ್ತಿದ್ದವು. ಅವರ ಋಣ ನಮ್ಮ ಮೇಲೆ ಇದೆ. ಹಾಗಾಗೀ ಅವರು ’ನಮ್ಮ ಮುಂದಿರುವ ಜೀವಂತ ದೇವರು’ ಎಂದು ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿ ಡಾ.ಪ್ರಭಾಕರ ಕೋರೆ, ’ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಹುಮೌಲಿಕವಾದ ಕೊಡುಗೆಯನ್ನು ನೀಡಿದೆ. ಜನರ ಆಶೋತ್ತರಿಗೆ ಸ್ಪಂದಿಸಿ ಜನಪರವಾದ ಆಡಳಿತವನ್ನು ನೀಡಿದೆ. ಹಲವಾರು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಜನರ ಸರ್ಕಾರವೆನಿಸಿದೆ. ಮತ್ತೊಮ್ಮೆ ಬಹುಮತವನ್ನು ನೀಡುವ ಮೂಲಕ ಆಡಳಿತ ಚುಕ್ಕಾಣೆ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಾಜ್ಯಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಬಿಜೆಪಿ ಪ್ರಗತಿಪರವಾದ ವಿಚಾರಗಳನ್ನು ಹೊಂದಿದೆ. ಅಭಿವೃದ್ಧಿಯ ನೆಲೆಯಲ್ಲಿ ದಾಪುಗಾಲಿಟ್ಟಿದೆ. ದೇಶದ ಜನತೆಯ ಕನಸನ್ನು ನನಸಾಗಿಸುವಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು. ಅಶೋಕ ಸ್ವಾಮಿ, ಧರೆಪ್ಪಾ ಕೋರೆ, ಗಜಾನನ ರಾವ್, ಸದಗೌಡ ಪಾಟೀಲ, ಕುಮಾರ ಚೌಗಲೆ ಹಾಗೂ ವೀರಶೈವ ಲಿಂಗಾಯತ ಸಮುದಾಯ ಮುಖಂಡರು ಮತ್ತು ಬಿಜೆಪಿಯ ಧುರಣೀರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ