Latest

ಚಿರು-ಮೇಘನಾ ಮದುವೆಗೆ ಮೇಘನಾ ಮನೆಯವರನ್ನ ಒಪ್ಪಿಸಿದ್ದ ಜಗ್ಗೇಶ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿರಂಜೀವಿ ಸರ್ಜಾ ಸಾವನ್ನಪ್ಪಿರುವುದು ಇಡೀ ಕನ್ನಡ ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದೆ. ಈ ನಡುವೆ ನವರಸನಾಯಕ ಜಗ್ಗೇಶ್ ಚಿರಂಜೀವಿ ಹಾಗೂ ಮೇಘನಾ ಮದುವೆಯ ಸಂದರ್ಭದ ಬಗ್ಗೆ ಭಾವನಾತ್ಮಕವಾದ ಟ್ವೀಟ್ ಒಂದನ್ನು ಮಾಡಿದ್ದಾರೆ.

ಚಿರು-ಮೇಘನಾ ಮದುವೆಗೆ ಮೇಘನಾ ತಂದೆ-ತಾಯಿಯರನ್ನು ಒಪ್ಪಿಸಿದ್ದು ನಟ ಜಗ್ಗೇಶ್ ಅವರಂತೆ. ಈ ಬಗ್ಗೆ ಸ್ವತ: ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು.! ಸಿಟ್ಟಿನಿಂದ ಯಾರು ಅಂದೆ..? ನಾನು ಮಾಮ ಚಿರು ಅಂದ.! ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ.! ನಕ್ಕು Pls ಮಾಮ Forget.! ಅಂದ.

ವಿಷಯ ನಾನು ಮೇಘನ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು.! ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಅಂದ.! ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ.. ಆಗ ಅವರು ಹೇಳಿದ್ದು “ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ.. ಅದಮಾಡಿ ಮುಂದುವರೆಯಿರಿ” ಎಂದರು.. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ.. ಮದುವೆ ನಿಶ್ಚಯ ಆಯಿತು.. ಗಣೇಶನ ಜೊತೆ ಒಂದು Guest Roll ಭಟ್ರ Combo ಮಾಡಿದೆ.. ಆ ಚಿತ್ರಿಕರಣ ಮೇಘನ ಮನೆ ಮುಂದೆಯೇ ಇತ್ತು.! ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿ fix ಆಗಿ ಮೇಘನ ಹಾಗು ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.. ದೇವರ ದಯೆಯಿಂದ ಮದುವೆಯು ಮುಗಿಯಿತು.. ನಂತರ ಚಿರು ಅನೇಕ ಬಾರಿ ಕರೆಮಾಡಿ “ಮಾಮ Pls ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ.! ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ.. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ “ಏನ್ ಹುಡುಗರೋ, ಮದುವೆ ಆದಮೇಲೆ ಯಾಕೆ Gap.? ಇಷ್ಟೊತ್ತಿಗೆ Good News ಬೇಕಿತ್ತು” ಎಂದು ಮಾತಾಡಿಕೊಂಡೆವು.! ಮಧ್ಯಾಹ್ನ ಊಟ ಮಾಡಿ ಮಲಗಿದೆ.. ಚಾಲಕ ಪದ್ದು ಕರೆಮಾಡಿ, Boss TV ನೋಡಿದ್ರಾ..? ಚಿರು ಹೋಗಿಬಿಟ್ಟಾ ಎಂದ.. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ.. ಇಷ್ಟೇನಾ ಬದುಕು.? ಇದಕ್ಕಾ ನಮ್ಮ ಹೋರಾಟ..? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ.? ಎಂಥ ದೌರ್ಭಾಗ್ಯ..! ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು.. ಆ ಸಾಲಿಗೆ ಚಿರು ಸೇರಿಬಿಟ್ಟನೆ..!

ಹುಟ್ಟಿಗೆ ಸಾವು ಖಚಿತ.. ಆದರೆ ಇಷ್ಟು ಬೇಗವೇ.!? ಓ ದೇವರೆ ಈ ಸಾವು ನ್ಯಾಯವೆ.!?

ದುಃಖದಿಂದ ವಿದಾಯ ಕಲಾಬಂಧುವಿಗೆ.. ಓಂಶಾಂತಿ!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button