ಚುಟುಕು ಸಾಹಿತ್ಯ ಸಮ್ಮೇಳನ ಉದ್ಘಾಟನೆಗೆ ಹುಕ್ಕೇರಿ ಶ್ರೀಗಳಿಗೆ ಆಹ್ವಾನ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ :
ಆಂದ್ರಪ್ರದೇಶದ ಮಂತ್ರಾಲಯದ ರಾಯರ ಶ್ರೀಕ್ಷೇತ್ರದಲ್ಲಿ ಜರಗುವ ಅಖಿಲ ಭಾರತ ಚುಟುಕು ಸಾಹಿತ್ಯ ದ್ವಿತೀಯ ಸಮ್ಮೇಳನದ ಉದ್ಘಾಟನೆಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಸಮಿತಿ ಆಹ್ವಾನಿಸಲು ಶ್ರೀಮಠಕ್ಕೆ ಬಂದು ಶ್ರೀಗಳ ಒಪ್ಪಿಗೆಯನ್ನು ಪಡೆದರು.
ಸೆಪ್ಟೆಂಬರ್ 11ರಂದು ಜರುಗುವ ಅಖಿಲ ಭಾರತ ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭಕ್ಕೆ ಶ್ರೀಗಳನ್ನು ಆಹ್ವಾನಿಸಿದ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ, ಚಂದ್ರಶೇಖರ ಶಿವಾಚಾರ್ಯರು ಆಧುನಿಕ ವಚನಕಾರರು. ಅಷ್ಟೆ ಅಲ್ಲದೇ ಸಾಹಿತ್ಯ, ಸಂಸ್ಕ್ರತಿ, ಕಲೆ ಮತ್ತು ಕನ್ನಡದ ಉಳಿವಿಗಾಗಿ ನಿರಂತರ ಪರಿಶ್ರಮಿಸುತ್ತಿರುವ ಪೂಜ್ಯರು. ಇವರನ್ನು ಆಂಧ್ರಪ್ರದೇಶದ ರಾಘವೇಂದ್ರಸ್ವಾಮಿಗಳ ಮಠದ ಅಧಿಪತಿಗಳಾದ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಅಣತಿಯಂತೆ ಉದ್ಘಾಟನೆಗಾಗಿ ಆಹ್ವಾನಿಸುತ್ತಿದ್ದೇವೆ.
ಈಗಾಗಲೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀಳನ್ನು ನಾವು ಆಹ್ವಾನಿಸಿ ಅವರ ಆಶೀರ್ವಾದವನ್ನು ಪಡೆದಿದ್ದೇವೆ. ಅಖಿಲ ಭಾರತ ಮಟ್ಟದಲ್ಲಿ ಮೊದಲು ಗೋವಾ ರಾಜ್ಯದಲ್ಲಿ ಜರುಗಿ, ಈಗ ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಜರುಗುತ್ತಿದ್ದು ಈ ಸಮ್ಮೇಳನದ ಅಧ್ಯಕ್ಷರಾಗಿ ನಾಲ್ವಾರದ ಕೋರಿಸಿದ್ದೇಶ್ವರ ಮಠದ ಸಿದ್ಧತೋಟೆಂದ್ರ ಮಹಾಸ್ವಾಮಿಗಳನ್ನು ಆಯ್ಕೆಮಾಡಲಾಗಿದೆ. ಈ ಸಮಾರಂಭದ ಸಾನಿಧ್ಯವನ್ನು ಮಂತ್ರಾಲಯದ ಸುಬುದೇಂದ್ರ ತೀರ್ಥ ಪಾದಂಗಳವರು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಗೋವಾ ಮತ್ತು ಇನ್ನೂ ಅನೇಕ ರಾಜ್ಯಗಳಿಂದ ಕನ್ನಡ ಚುಟುಕು ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ