ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಯ ಡಿಜಿಪಿ ಡಾ.ಎಂ.ಎ.ಸಲೀಂ ಶನಿವಾರ ಹಿರೇಕೋಡಿ ನಂದಿಪರ್ವತ ಆಶ್ರಮಕ್ಕೆ ಭೇಟಿ ನೀಡಿದರು.
ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್, ಸಿಐಡಿ ಎಸ್‌ಪಿ ವೆಂಕಟೇಶಕುಮಾರ್, ಬೆಳಗಾವಿ ಎಸ್‌ಪಿ ಡಾ.ಸಂಜೀವ್ ಪಾಟೀಲ್ ಮದಲಾದವರಂದಿಗೆ ಆಗಮಿಸಿದ ಅವರು ಆಶ್ರಮ, ಮುನಿಗಳ ಶವವನ್ನು ಹಾಕಲಾಗಿದ್ದ ಹಲ ಸೇರಿದಂತೆ ವಿವಿಧ ಸ್ಥಳಗಳನ್ನು ಪರಿಶೀಲಿಸಿದರು.
ಸಿಐಡಿ ಐಜಿ ಪ್ರವೀಣ ಮಧುಕರ್ ಪವಾರ್ ಐದು ದಿನ ಚಿಕ್ಕೋಡಿಯಲ್ಲೇ ಬೀಡುಬಿಟ್ಟು ತನಿಖೆ ನಡೆಸಿದ್ದರು. ಇದೀಗ ತನಿಖೆ ಅಂತಿಮ ಹಂತ ತಲುಪಿದ್ದು, ಡಿಜಿಪಿ ಖುದ್ದು ಪರಿಶೀಲನೆ ನಡೆಸಿದರು.
ಜುಲೈ 5ರಂದು ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನಡೆದಿತ್ತು. ಜುಲೈ 7ರಂದು ಚಿಕ್ಕೋಡಿ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ನಾಪತ್ತೆ ಕೇಸ್ ದಾಖಲಾದ ನಾಲ್ಕು ಗಂಟೆಯಲ್ಲೇ ಇಬ್ಬರು ಆರೋಪಿಗಳನ್ನು ಪಲೀಸರು ಬಂಧಿಸಿದ್ದರು.
ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ ಬಂಧನಕ್ಕೋಳಗಾಗಿದ್ದು, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಹಿರೇಕೋಡಿ ನಂದಿಪರ್ವತ ಆಶ್ರಮದಲ್ಲೇ ಜೈನಮುನಿಗಳ ಹತ್ಯೆಗೈದು, ಮೃತದೇಹವನ್ನು ಮಾವಿನಹೊಂಡ ಬಳಿಯ ಗುಡ್ಡಕ್ಕೆ ಒಯ್ದು ಪೀಸ್ ಪೀಸ್ ಮಾಡಿದ್ದರು. ಬಳಿಕ ಖಟಕಬಾವಿಯ ಕಬ್ಬಿನ ಗದ್ದೆಯಲ್ಲಿನ ತೆರೆದ ಕೊಳವೆಬಾವಿಗೆ ಎಸೆದಿದ್ದರು.
ಜುಲೈ 8ರಂದು ಕೊಳವೆಬಾವಿಯಿಂದ ಜೈನಮುನಿಗಳ ಮೃತದೇಹವನ್ನು ಪೋಲೀಸರು ಹೊರತಗೆದಿದ್ದರು. ನಂತರ ಪ್ರಕರಣ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ