Wanted Tailor2
Cancer Hospital 2
Bottom Add. 3

ಕೆಇಎ ಪರೀಕ್ಷಾ ಅಕ್ರಮ ತನಿಖೆ ಆರಂಭಿಸಿದ ಸಿಐಡಿ

ಪ್ರಗತಿವಾಹಿನಿ ಸುದ್ದಿ, ಕಲಬುರಗಿ: ಕೆಇಎ ಪರೀಕ್ಷಾ ಅಕ್ರಮ ಕುರಿತ ತನಿಖೆಯನ್ನು ಸರಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳ ತಂಡ ಕಲಬುರಗಿಗೆ ಆಗಮಿಸಿ ತನಿಖೆ ಆರಂಭಿಸಿದೆ.

ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ, ಓಎಂಆರ್‌ ಶೀಟ್‌ ತಿದ್ದಿ ನಡೆಸಲಾಗಿದೆ ಎನ್ನಲಾದ ಅಕ್ರಮಗಳ ತನಿಖೆಗೆ ಸಂಬಂಧಿತ ಎಲ್ಲ ಕಡತಗಳನ್ನು ಅಧಿಕೃತವಾಗಿ ಪೊಲೀಸರಿಂದ ಪಡೆದುಕೊಂಡಿರುವ ಸಿಐಡಿ ತಂಡ ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದೆ.

ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್‌, ಆತನಿಗೆ ಆಶ್ರಯ ನೀಡಿದವರು ಸೇರಿದಂತೆ ಹಲವರು ಆರೋಪಿಗಳು ಈಗಾಗಲೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಪುನಃ ಕಸ್ಟಡಿಗೆ ಪಡೆಯಲು ಸಿಐಡಿ ಸಿದ್ಧತೆಗಳನ್ನು ಆರಂಭಿಸಿದ್ದು ದೀಪಾವಳಿ ಸಂದರ್ಭವಾದ್ದರಿಂದ ನ್ಯಾಯಾಲಯಕ್ಕೂ ರಜೆ ಇದ್ದ ಹಿನ್ನೆಲೆಯಲ್ಲಿ ಕೊಂಚ ವಿಳಂಬವಾಗಿದೆ ಎನ್ನಲಾಗಿದೆ.

ಯಾದಗಿರಿಯಲ್ಲೂ 5 ಪ್ರಕರಣಗಳು ದಾಖಲಾಗಿರುವುದರಿಂದ ಅಲ್ಲಿನ ಕಡತಗಳನ್ನು ಸಹ ಸಿಐಡಿ ತಂಡ ಸಂಗ್ರಹಿಸಲು ಮುಂದಾಗಿದೆ.

 ಪಿಎಸ್‌ಐ ಹಗರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ಪ್ರಾಥಮಿಕ ಹಂತದ ತನಿಖೆ ಆರಂಭಗೊಂಡಿದ್ದು ತಂಡದಲ್ಲಿ ಡಿವೈಎಸ್ಪಿ ತನ್ವೀರ್‌, ಶಂಕರಗೌಡ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಯಿದ್ದಾರೆ.

Bottom Add3
Bottom Ad 2

You cannot copy content of this page