ಪ್ರಗತಿವಾಹಿನಿ; ರಾಯಚೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಪೌರತ್ವ ಕೊಡಲು ಇರುವ ಕಾನೂನು ಹೊರತು ಕಿತ್ತುಕೊಳ್ಳುವ ಕಾನೂನು ಅಲ್ಲ. ಇದರಿಂದ ಯಾವುದೇ ತೊಂದರೆಗಳೂ ಆಗುವುದಿಲ್ಲ. ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಸಿಎಎ ವಿರೋಧಿಸಿ ದೇಶದಲ್ಲಿ ಹೋರಾಟ ಮಾಡುತ್ತಿವೆ. ಪಾಕಿಸ್ತಾನದ ಭಾಷೆ ಕಾಂಗ್ರೆಸ್ ಭಾಷೆ ಒಂದೇ ಆಗಿದೆ ಪಾಕಿಸ್ತಾನದ ಭಯೋತ್ಪಾದನೆ ಮುಖವನ್ನು ವಿಶ್ವದ ಮುಂದೆ ನಿಲ್ಲಿಸುವ ನಮ್ಮ ಯತ್ನವನ್ನು ವಿರೋಧಿಸಿ ಅವರಿಗೆ ಬೆಂಬಾಲಾ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಾಕ್ನಲ್ಲಿನ ಅಸಹಿಷ್ಣುತೆ ಹಾಗೂ ಸರ್ಕಾರ ಅಲ್ಪ ಸಂಖ್ಯಾತರ ಮೇಲಿನ ನಡೆಸಿರುವ ಧಾರ್ಮಿಕ ಅತ್ಯಾಚಾರವನ್ನು ಜಗತ್ತಿಗೆ ತೋರಿಸಲು ಅವಕಾಶ ಸಿಕ್ಕಿದೆ. ಪಾಕಿಸ್ತಾನದಲ್ಲಿ ಶೇ. 22ರಷ್ಟು ಇದ್ದ ಹಿಂದೂ ಅಲ್ಪಸಂಖ್ಯಾತರ ಜನಸಂಖ್ಯೆ ಶೇ. 2ಕ್ಕೆ ಇಳಿದಿದೆ. ದೇಶಕ್ಕೆ ಲಕ್ಷಾಂತರ ಜನ ಅಕ್ರಮವಾಗಿ ನುಸುಳಿ ಬಂದಿದ್ದಾರೆ, ಅವರ ಬಗ್ಗೆ ಚಕಾರವೆತ್ತುತ್ತಿಲ್ಲ. ಕಾಂಗ್ರೆಸ್ನವರು ಅಲ್ಪ ಸಂಖ್ಯಾತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ಪೌರತ್ವ ಕೊಡಲು ಇರುವ ಕಾನೂನು ಹೊರತು ಕಿತ್ತುಕೊಳ್ಳುವ ಕಾನೂನು ಅಲ್ಲ. ಕಾಂಗ್ರೆಸ್ ನವರು ಮಾಡಲು ಆಗದಿರುವುದನ್ನ ನಾವು ಮಾಡಿದ್ದೇವೆ. ಸಿಎಎ ಬಗ್ಗೆ ಯಾವುದೇ ತಪ್ಪಿ ತಿಳುವಳಿಕೆಗಳು ಬೇಡ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ