ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಾಲಾಗಿದ್ದೂ ಜನರನ್ನು ರಕ್ಷಿಸಲು ವೈದ್ಯರು, ನರ್ಸ್ ಮತ್ತು ಪೊಲೀಸರು ಮಾತ್ರವಲ್ಲ ಪೌರಕಾರ್ಮಿಕರು ಕೂಡ ಹೋರಾಡುತ್ತಿದ್ದಾರೆ.
ಹೌದು. ಲಾಕ್ ಡೌನ್ ಘೋಷಿಸಿದ್ದರೂ ಬೆಂಗಳೂರಿನಲ್ಲಿ ರಸ್ತೆ ರಸ್ತೆಗಳಿಗೆ ತೆರಳಿ ಸ್ವಚ್ಛತೆ ಮಾಡುತ್ತಿರುವ, ಹಸಿ ಹಾಗೂ ಒಣ ಕಸಗಳನ್ನು ಸಂಗ್ರಹಿಸುತ್ತಿರುವ ಪೌರ ಕಾರ್ಮಿಕರನ್ನು ದುಡ್ದಿನ ಹಾರ ಹಾಕಿ ಸನ್ಮಾನಿಸಲಾಯಿತು.
ಪೌರ ಕಾರ್ಮಿಕರು ಪ್ರತಿ ಮನೆ, ರಸ್ತೆಗೂ ಹೋಗಿ ಕಸವನ್ನು ತೆಗೆದುಕೊಂಡು ಸ್ವಚ್ಛತೆ ಮಾಡುತ್ತಾರೆ. ಹೀಗಾಗಿ ಬೆಂಗಳೂರಿನ ಶ್ರೀರಾಂಪುರದಲ್ಲಿ ಸ್ಥಳೀಯರು ರಿಯಲ್ ಕೊರೊನಾ ವಾರಿಯರ್ಸ್ ಎಂದು ಹಣದ ಹಾರ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಸುತ್ತಲಿನ ಜನರು ತಮ್ಮ ತಮ್ಮ ಮನೆಗಳಲ್ಲೇ ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ