ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸಮುದಾಯ ಸೇವೆಯ ಅಂಗವಾಗಿ ರೋಟರಿ ಕ್ಲಬ್ ಆಫ್ ಬೆಳಗಾವಿ ಸೌಥ್ ಗುರುವಾರ ಬೆಳಗಾವಿಯಲ್ಲಿ ಸಾರ್ವಜನಿಕರಿಗೆ ಬಟ್ಟೆಯ ಕೈಚೀಲಗಳನ್ನು ವಿತರಿಸಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಹಯೋಗದಲ್ಲಿ ನಗರದ ಆರ್ ಪಿಡಿ ಕ್ರಾಸ್, ಮೊದಲ ರೈಲ್ವೆ ಗೋಟ್ ಮೊದಲಾದ ಕಡೆ ಸುಮಾರು 300ಕ್ಕೂ ಹೆಚ್ಚು ಚೀಲಗಳನ್ನು ವಿತರಿಸಲಾಯಿತು.
ಮಹಾತ್ಮಾ ಗಾಧೀಜಿಯವರ 150ನೇ ಜನ್ಮ ದಿನದ ಅಂಗವಾಗಿ ಪ್ಲ್ಯಾಸ್ಟಿಕ್ ವಿರುದ್ಧ ಜನಜಾಗೃತಿ ಮಾಡುವ ಯೋಜನೆಯ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರೋಟರಿ ಕ್ಲಬ್ ಆಫ್ ಬೆಳಗಾವಿ ಸೌಥ್ ಅಧ್ಯಕ್ಷ ಜಯಸಿಂಹ, ಸತೀಶ್ ಕುಲಕರ್ಣಿ, ವೀರಧವಲ್ ಉಪಾಧ್ಯೆ, ಅಶೋಕ ನಾಯಕ, ಬಬನ್ ದೇಶಪಾಂಡೆ, ವಾಣಿ, ರೇಖಾ ನಾಶಿ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ