
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಸ್ತೆ ಬದಿಯ ಹೊಟೆಲ್ ನಲ್ಲಿ ಉಪಾಹಾರ ಸೇವಿಸಿದರು.
ಬೆಂಗಳೂರಿನ ಎಂ.ಟಿ.ಆರ್.ಹೊಟೆಲ್ ನಲ್ಲಿ ಸೇವಿಸಿದ ಮುಖ್ಯಮಂತ್ರಿ, ಲಾಕ್ ಡೌನ್ ನಂತರ ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವ ಉದ್ದೇಶದಿಂದ ಹೊಟೆಲ್ ನಲ್ಲಿ ಉಪಾಹಾರ ಸೇವಿಸಿದ್ದಾಗಿ ತಿಳಿಸಿದರು.
ಸಚಿವ ಆರ್.ಅಶೋಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಂಸದ ತೇಜಸ್ವಿ ಸೂರ್ಯ ಜೊತೆಗಿದ್ದರು.