ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗುವುದಿಲ್ಲ. ಓರ್ವ ರೈತನ ಮಗನಾಗಿ, ರೈತ ಸುಮಾದಯಗಳ ಆಶೀರ್ವಾದದಿಂದ 4ನೇ ಬಾರಿ ಮುಖ್ಯಮಂತ್ರಿ ಹುದ್ದೆಗೆ ಬಂದಿರುವ ನ್ನನ್ನಿಂದ ರೈತ ವರ್ಗಕ್ಕೆ ತೊಂದರೆಯಾಗುವುದಿಲ್ಲ. ರೈತರ ಹಿತದೃಷ್ಟಿಯಿಂದ ಸಮಗ್ರ ಚರ್ಚೆ ಬಳಿಕ ಮಸೂದೆ ತಿದ್ದುಪಡಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಬೆಳೆ ನನ್ನ ಹಕ್ಕು ಎಂಬ ರೀತಿಯಲ್ಲಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದೇಶದ ಯಾವುದೇ ಭಾಗಕ್ಕೆ ಹೋಗಿ ಮಾರಾಟ ಮಾಡಬಹುದು. ಹಿಂದೆ ಒಂದು ಭಾಗದ ಬೆಳೆ ಮತ್ತೊಂದು ಭಾಗಕ್ಕೆ ಮಾರಾಟ ಮಾಡಿದರೆ ಪ್ರಕರಣ ದಾಖಲಾಗುತ್ತಿತ್ತು. ಆದರೆ ಈ ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ತನ್ನ ಉತ್ಪನ್ನಕ್ಕೆ ಎಲ್ಲಿ ಉತ್ತಮ ಬೆಲೆ ಸಿಗತ್ತೆ ಅಲ್ಲಿ ಹೋಗಿ ಮಾರಾಟ ಮಾಡುವ ಅವಕಾಶವನ್ನು ಸರ್ಕಾರ ತಂದಿದೆ ಎಂದರು.
ಭೂ ಸುಧಾರಣೆಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರಾವರಿಗೆ ಅನುಕೂಲವಲ್ಲದ ಭೂಮಿಯನ್ನು ಕೈಗಾರಿಕೆಗೆ ಬಳಸಬಹುದು. ನೀರಾವರಿ ಜಮೀನನ್ನು ಯಾರೇ ಕೊಂಡುಕೊಂಡರು ನೀರಾವರಿಗೆ ಮಾತ್ರ ಉಪಯೋಗಿಸಬೇಕು. ಪರಿಶಿಷ್ಠ ವರ್ಗದವರ ಭೂಮಿ ಕೊಂಡುಕೊಳ್ಳುವಂತಿಲ್ಲ. ಸಣ್ಣ ಅತಿ ಸಣ್ಣ ರೈತರಿಗೆ ಯಾವುದೇ ತೊಂದರೆ ನಿಡುವಂತಿಲ್ಲ ಎಂದು ಕಾನೂನಿನಲ್ಲಿ ತಿದ್ದುಪಡಿ ತರಲಾಗಿದೆ. ಹೀಗಾಗಿ ಈ ಕಾನೂನು ತಿದ್ದುಪಡಿಯಿಂದ ಹೇಗೆ ತೊಂದರೆಯಾಗಲಿದೆ ಎಂಬುದನ್ನು ರೈತರೇ ವಿವರಿಸಬೇಕು ಎಂದು ಹೇಳಿದರು.
ಈ ಹಿಂದೆ ಈ ಕಾನೂನಿಲ್ಲಿ ಹೀಗೆಯೇ ತಿದ್ದುಪಡಿಯಾಗಬೇಕು ಎಂದು ಕಾಂಗ್ರೆಸ್ ನ ಮುಖಂಡರೆ ಹೋರಾಟ ನಡೆಸಿದ್ದರು. ಆದರೆ ಈಗ ಸಿಎಂ ಯಡಿಯೂರಪ್ಪ, ಬಿಜೆಪಿ ಸರ್ಕಾರ ಈ ತಿದ್ದುಪಡಿ ತಂದಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ರೈತರನ್ನು ಪ್ರಚೋದಿಸಿರುವುದು ವಿಪರ್ಯಾಸ ಎಂದರು.
ರೈತರನ್ನು ಅನಗತ್ಯ ಗೊಂದಲಕ್ಕೆ ದೂಡಿ, ಅವರ ದಾರಿತಪ್ಪಿಸುವ ಕೆಲಸಗಳನ್ನು ಮಾಡಬೇಡಿ ಎಂದು ವಿಪಕ್ಷಗಳಲ್ಲಿ ಮನವಿ ಮಾಡುತ್ತೇನೆ. ರೈತರನ್ನು ಬಂದನದಲ್ಲಿಟ್ಟು ಪ್ರತಿಭಟನೆ ರೈತ ಮುಖಂಡರು ಪ್ರತಿಭಟನೆ ನಡೆಸುವುದು ಸರಿಯಲ್ಲ. ರೈತರು ಕೂಡ 6 ತಿಂಗಳಿಂದ 1 ವರ್ಷದ ವರೆಗೆ ಕಾದುನೋಡಿ. ನಿಮಗೆ ತಿದ್ದುಪಡಿಯಿಂದ ಅನುಕೂಲವಾಗಲಿದೆ ಎಂಬುದನ್ನು ನೀವೆ ಒಪ್ಪಿಕೊಳ್ಳುತ್ತೀರಿ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ