ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತರು ಬೆಳೆದ ಬೆಳೆಗಳನ್ನು ದೂರದ ಊರು, ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಿಸಾನ್ ರೈಲು ಯೋಜನೆಗೆ ಸಿಎಂ ಬಿ.ಎಸ್,ಯಡಿಯೂರಪ್ಪ ಚಾಲನೆ ನೀಡಿದರು.
ಯಲಹಂಕ ರೈಲ್ವೆ ನಿಲ್ದಾಣದಿಂದ ನವದೆಹಲಿಗೆ ತೆರಳುತ್ತಿರುವ “ಕಿಸಾನ್ ರೈಲ್”ಗೆ ಇಂದು ಹಸಿರು ನಿಶಾನೆ ತೋರಿಸಿದ ಸಿಎಂ ಯಡಿಯೂರಪ್ಪ, ರೈತರ ಬೆಳೆಗೆ ಉತ್ತಮ ಮೌಲ್ಯ ಒದಗಿಸುವ ನಿಟ್ಟಿನಲ್ಲಿ ಕಿಸಾನ್ ರೈಲು ವಹಿಸುತ್ತಿರುವ ಪಾತ್ರ ಮಹತ್ವದ್ದಾಗಿದೆ. ರೈಲ್ವೆ ಮುಖಾಂತರ ಹಣ್ಣು, ತರಕಾರಿಗಳ ಸಾಗಾಣೆ ಮಾಡಲು ಕಿಸಾನ್ ರೈಲು ಸೌಲಭ್ಯವನ್ನು ಆಗಸ್ಟ್ 2020ರಲ್ಲಿ ಆರಂಭಿಸಲಾಯಿತು ಎಂದರು.
ಕೃಷಿ ಉತ್ಪಾದನೆಗೆ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವ ಈ ಯೋಜನೆಯನ್ನು ಜಾರಿಗೆ ತಂದ ಪ್ರಧಾನಿ ಮೋದಿಯವರಿಗೆ ಧನ್ಯವಾದ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಮಾವಿನ ಬೆಳೆಗಾರರಿಗೆ ಈ ಯೋಜನೆ ಲಾಭವಾಗುತ್ತಿದೆ. ಇತರ ತರಕಾರಿ ಹಣ್ಣು ಬೆಳೆಗಾರರು ಕೂಡ ಈ ಅವಕಾಶ ಬಳಸಿಕೊಂಡು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಲಾಭ ಪಡೆಯಬಹುದು ಎಂದರು.
ಕೇಂದ್ರ ಸರ್ಕಾರದಿಂದ ಆಒಅಪೇಷನ್ ಗ್ರೀನ್ಸ್, ಶಾರ್ಟ್ ಟರ್ಮ್ ಇಂಟರ್ ವೆನ್ಶನ್ ಫಾರ್ ಫ್ರೂಟ್ಸ್ ಆಂಡ್ ವೆಜಿಟೇಬಲ್ಸ್ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಹಣ್ಣು, ತರಕಾರಿ ಸಾಗಣೆ ಹಾಗೂ ಶೇಖರಣೆಗಾಗಿ ಶೇ.50ರಷ್ಟು ಸಹಾಯಧನ ಪಡೆಯಲು ವಕಾಶ ನೀಡಲಾಗಿದೆ. ಹಣ್ಣು, ತರಕಾರಿ ಮತ್ತು ಡೈರಿ ಉತ್ಪನ್ನಗಳನ್ನು ಸುರಕ್ಷಿತವಾಗಿ, ತ್ವರಿತವಾಗಿ, ಬೇಡಿಕೆ ಇರುವ ಮಾರುಕಟ್ಟೆಗಳಿಗೆ ತಲುಪಿಸುವಲ್ಲಿ ಕಿಸಾನ್ ರೈಲು ಸಹಕಾರಿ. ರೈತರು ರೈತ ಉತ್ಪಾದಕ ಸಂಸ್ಥೆಗಳು ಹಾಗೂ ವರ್ತಕರು ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.
ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರ ಸಾಗಾಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ