Kannada NewsLatest

ಮತ್ತೆ ಮೂರು ಸಹೋದರರ ಮೃತ ದೇಹ ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ಸಹೋದರರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಇದೀಗ ನಾಲ್ವರ ಮೃತದೇಹ ಪತ್ತೆಯಾಗಿದ್ದು, ಎನ್ ಡಿ ಆರ್ ಎಫ್ ತಂಡ ನಾಲ್ವರು ಸಹೋದರರ ಶವ ಹೊರತೆಗೆದಿದೆ.

ಬಟ್ಟೆ ತೊಳೆಯಲೆಂದು ಕೃಷ್ಣಾ ನದಿಗೆ ಇಳಿದಿದ್ದಾಗ ನಾಲ್ವರು ಸಹೋದರರು ಒಬ್ಬರ ಹಿಂದೊಬ್ಬರಂತೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ನಿನ್ನೆ ಹಿರಿಯ ಸಹೋದರ ಪಸಪ್ಪ ಬನಸೊಡೆ ಶವ ಪತ್ತೆಯಾಗಿತ್ತು. ಇಂದು ಮತ್ತೆ ಮೂವರು ಸಹೋದರರ ಶವ ಪತ್ತೆಯಾಗಿದ್ದು, ಶಂಕರ ಬನಸೊಡೆ, ಸದಾಶಿವ ಬನಸೊಡೆ, ಧರೆಪ್ಪ ಬನಸೊಡೆ ಶವಪತ್ತೆಯಾಗಿದ್ದು, ಎನ್ ಡಿ ಆರ್ ಎಫ್, ಮೃತದೇಹಗಳನ್ನು ಹೊರತೆಗೆದಿದೆ.

Home add -Advt

ಅಥಣಿಯ ಹಲ್ಯಾಳು ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿತ್ತು.
ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರ ಸಾಗಾಟ

Related Articles

Back to top button