Latest

ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರ ಸಾಗಾಟ

ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕನ್ನಡ: ಲಸಿಕೆ ಕೊಡಿಸುವುದಾಗಿ ಹೇಳಿ 85 ಮಹಿಳೆಯರನ್ನು ರಾತ್ರೋರಾತ್ರಿ ಸಾಗಾಟ ಮಾಡುತ್ತಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ತಾಲೂಕಿನ ಕಾರ್ನಾಡುವಿನಲ್ಲಿನಡೆದಿದೆ.

ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆ ಮ್ಯಾನೇಜರ್ ನವಾಜ್ ಹಾಗೂ ಚಾಲಕ ಪ್ರವೀಣ್ ತಡರಾತ್ರಿ ಕಾರ್ನಾಡುವಿನಿಂದ ಮಹಿಳೆಯರನ್ನು ಕರೆದೊಯ್ದಿದ್ದರು. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಇಬ್ಬರು ತಬ್ಬಿಬ್ಬಾಗಿದ್ದಾರೆ.

Home add -Advt

ತಕ್ಷಣ ಗ್ರಾಮಸ್ಥರು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮ್ಯಾನೇಜರ್ ನವಾಜ್ ಹಾಗೂ ಚಾಲಕ ಪ್ರವೀಣ್ ವಿರುದ್ಧ ಕೇಸ್ ದಾಖಲಾಗಿದೆ.

 

Related Articles

Back to top button