Kannada NewsKarnataka News

ಮನೆ ಕಳೆದುಕೊಂಡ ಲಕ್ಷ್ಮಿ ಮಡಿಲಿಗೆ ಭಾಗ್ಯ ಲಕ್ಷ್ಮಿ

ಮನೆ ಕಳೆದುಕೊಂಡಾಕೆಯ ಮಡಿಲಿಗೆ ಭಾಗ್ಯ ಲಕ್ಷ್ಮಿ

 

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ –
ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿದ್ದ ಪ್ರವಾಹದಿಂದಾಗಿ ಸಾವಿರಾರು ಜನರು ಮನೆ ಕಳೆದುಕೊಂಡು ಅನಾಥರಾಗಿದ್ದಾರೆ. ಹಾಗೆಯೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ಗರ್ಭಿಣಿಯೊಬ್ಬರು ಸಹ ಮನೆಯನ್ನು ಕಳೆದುಕೊಂಡಿದ್ದರು.
ಇದೀಗ ಆಕೆ ಸುಂದರವಾದ ಹೆಣ್ಣು ಮಗುವೊಂದನ್ನು ಹೆತ್ತಿದ್ದಾಳೆ. ಲಕ್ಷ್ಮೀ ಮಂಜುನಾಥ ನವಲಗುಂದ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ. ಮಲಪ್ರಭಾ ನದಿಯ ನೀರಿನ ಪ್ರವಾಹಕ್ಕೆ ಮನೆ ಸಂಪೂರ್ಣ ಜಲಾವೃತ ಆಗಿ ಕುಸಿದು ಹೋಗಿತ್ತು.
ಸಂಬಂಧಿಕರ ಮನೆಯಲ್ಲಿ ಇದ್ದ ಲಕ್ಷ್ಮೀ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರಾಮದುರ್ಗ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಲಕ್ಷ್ಮೀ.
ಒಂದೆಡೆ ಮಗುವಿಗೆ ಜನ್ಮ ನೀಡಿದ ಖುಷಿ. ಇನ್ನೊಂದೆಡೆ ಪ್ರವಾಹದಿಂದ ಮನೆ ಬಿದ್ದ ದುಃಖದಲ್ಲಿ ಮಹಿಳೆ ಇದ್ದಾಳೆ.

Related Articles

Back to top button