ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಳೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರಕ್ಕೆ ಬಂದು 6 ತಿಂಗಳ ಪೂರೈಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ನಾಳೆ ಸಿಎಂ ಬೊಮ್ಮಾಯಿ ಅವರ ಹುಟ್ಟುಹಬ್ಬ ಕೂಡ ಬಂದಿದೆ. ಡಬಲ್ ಸಂಭ್ರಮವಿದ್ದರೂ ಯಾವುದೇ ಸಂಭ್ರಮಾಚರಣೆ, ಹೊಸ ಘೋಷಣೆಗಳು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ನಾಳೆ 62ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಆದರೆ ನಾಳೆ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಸಿಎಂ ಆಗಿ ನಾಳೆಗೆ 6 ತಿಂಗಳು ಪೂರೈಕೆಯಾಗುತ್ತದೆ. ಹಾಗಾಗಿ 6 ತಿಂಗಳ ಆಡಳಿತ ಪಕ್ಷಿನೋಟ ಬಿಡುಗಡೆ ಮಾಡುತ್ತೇನೆ. ಆದರೆ ಯಾವುದೇ ಹೊಸ ಘೋಷಣೆಗಳನ್ನು ಮಾಡಲ್ಲ. 6 ತಿಂಗಳಿಗೆಲ್ಲ ಹೊಸ ಘೋಷಣೆ ಯಾರೂ ಮಾಡಲ್ಲ ಎಂದರು.
ಇನ್ನು ಕೋವಿಡ್ ನಿರ್ವಹಣೆ ಬಗ್ಗೆ ವರದಿ ಕೇಳಿದ್ದೇವೆ. ಕ್ಯಾಬಿನೆಟ್ ಅಜೆಂಡಾ ಮೇಲೆ ವಿಚಾರ ಚರ್ಚೆಯಾಗುತ್ತದೆ. ನಿಯಮ ಸಡಿಲಿಕೆ ಬಗ್ಗೆ ವಿಷಯ ಬಂದರೆ ಈ ಬಗ್ಗೆ ಮಧ್ಯಾಹ್ನ ನಡೆಯುವ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಪರಿಷತ್ ಸಭಾಪತಿ ಹೊರಟ್ಟಿ ವಿರುದ್ಧ FIR ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ