
ಪ್ರಗತಿವಾಹಿನಿ ಸುದ್ದಿ; ಹಾವೇರಿ: ಈ ಬದುಕು ಶಾಶ್ವತ ಅಲ್ಲ, ಸ್ಥಾನಮಾನವೂ ಶಾಶ್ವತವಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭಾನುವಾರ ಭಾವುಕರಾದರು.
ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಜೀವನದಲ್ಲಿ ಯಾವುದೂ ಶಾಶ್ವತವಲ್ಲ, ಬದುಕು, ಸ್ಥಾನಮಾನ ಯಾವುದೂ ಕೂಡ ಶಾಶ್ವತವಲ್ಲ, ನಾವು ಎಷ್ಟುದಿನ ಇರುತ್ತೇವೆ ಎಂಬುದು ಗೊತ್ತಿಲ್ಲ. ಪ್ರೀತಿ, ವಿಶ್ವಾಸದ ಮುಂದೆ ಅಧಿಕಾರ ಮಹತ್ವದ್ದಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.
ಮುಖ್ಯಮಂತ್ರಿಯಾದ ಬಳಿಕ ಕ್ಷೇತ್ರದ ಕಡೆ ಗಮನಹರಿಸಲಾಗುತ್ತಿಲ್ಲ. ಸಿಎಂ ಸ್ಥಾನದ ಜತೆಗೆ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ. ಪ್ರೀತಿ, ವಿಶ್ವಾಸದ ಮುಂದೆ ಅಧಿಕಾರ ಮಹತ್ವದ್ದಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭಾವನಾತ್ಮಕವಾಗಿ ಮಾತನಾಡಿರುವುದು ಹಲವು ರೀತಿ ವಿಶ್ಲೇಷಣೆಗಳಿಗೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಉತ್ತರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆಗೊಳಿಸಲಿರುವ CM




