Latest

ಪುನೀತ್ ರಾಜ್ ಕುಮಾರ್ ಗೆ ಶೀಘ್ರದಲ್ಲಿಯೇ ‘ಕರ್ನಾಟಕ ರತ್ನ’ ಪ್ರದಾನ; ಸಿಎಂ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಶೀಘ್ರದಲ್ಲಿಯೇ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ ರಾಜ್ಯ ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ಘೋಷಿಸಿದೆ. ಅವರ ಕುಟುಂಬದ ಜತೆ ಚರ್ಚಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಇಂದು ನಮ್ಮೆಲ್ಲರ ಅಚ್ಚುಮೆಚ್ಚು ಪುನೀತ್ ಅವರ 47ನೇ ಹುಟ್ಟುಹಬ್ಬ. ಪುನಿತ್ ರಾಜ್ ಕುಮಾರ್ ಅವರಿಲ್ಲದೇ ನಾವೆಲ್ಲರೂ ದು:ಖದಲ್ಲಿದ್ದೇವೆ. ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ. ಅಂಗಾಂಗ ದಾನ ಮಾಡಿರುವುದು ನಮಗೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.

ಇದೇ ವೇಳೆ ಇಂದು ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಸಿನಿಮಾ ಯಶಸ್ವಿಯಾಗಲಿ ಎಂದು ಶುಭಕೋರುತ್ತೇನೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಜೇಮ್ಸ್ ಜಾತ್ರೆ; ಟಿಕೆಟ್ ಸಿಗದೆ ಅಭಿಮಾನಿಗಳ ಆಕ್ರೋಶ; ಲಾಠಿ ಚಾರ್ಜ್

Related Articles

Back to top button