Latest

ಗಾಯಕ ಸಿದ್ದು ಮೂಸೆವಾಲಾ ತಂದೆಗೆ ಜೀವ ಬೆದರಿಕೆ

ಪ್ರಗತಿವಾಹಿನಿ ಸುದ್ದಿ, ಚಂಡೀಗಡ: ಇತ್ತೀಚೆಗೆ ಗುಂಡೇಟಿಗೆ ಬಲಿಯಾದ ಗಾಯಕ ಸಿದ್ದು ಮೂಸೆವಾಲಾ ತಂದೆ ಬಲ್ಕೌರ್ ಸಿಂಗ್ ಅವರಿಗೆ  ಹಣಕ್ಕಾಗಿ ಕೊಲೆ ಬೆದರಿಕೆ ಒಡ್ಡಿರುವ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 

ಪೊಲೀಸರಿಗೆ ನೀಡಿದ ದೂರಿನಲ್ಲಿ,  ಬಲ್ಕೌರ್ ಸಿಂಗ್ ಅವರು ತಮಗೆ ಜೀವ ಬೆದರಿಕೆ ಹಾಕಿರುವ ಮೇಲ್ ಕಳುಹಿಸಲಾಗಿದ್ದು ಹಣಕ್ಕಾಗಿ ಬೇಡಿಕೆಯಿಡಲಾಗಿದೆ ಎಂದು ತಿಳಿಸಿದ್ದಾರೆ.

Home add -Advt

ಹಿಂದಿ ಭಾಷೆಯಲ್ಲಿರುವ ಮೇಲ್ ಕಳುಹಿಸಿದ ವ್ಯಕ್ತಿ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಮಾತನಾಡುವುದನ್ನು ಸಿಂಗ್ ನಿಲ್ಲಿಸಬೇಕು ಎಂದು ಬೆದರಿಕೆಯೊಡ್ಡಿರುವುದಾಗಿ ಅವರು ದೂರಿದ್ದಾರೆ.

ಕಳೆದ ಮೇ 29ರಂದು ಸಿದ್ದು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಹತ್ಯೆಯ ಹೊಣೆಯನ್ನು ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ವಹಿಸಿಕೊಂಡಿದ್ದ.

ಬೆಳಗಾವಿಗೆ ಆಗಮಿಸಿದ ಸಚಿವ ಉಮೇಶ್ ಕತ್ತಿ ಪಾರ್ಥಿವ ಶರೀರ

Related Articles

Back to top button