Kannada NewsLatest

*ಬೆಳಗಾವಿಯಲ್ಲಿ ಸಿಎಂ ಇಂದೇ ಕುಂದಾ ಖರೀದಿಸಿದ್ದೇಕೆ?*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬೆಳಗಾವಿಯ ಖಾನಾಪುರ ರಸ್ತೆಯಲ್ಲಿರುವ ಕ್ಯಾಂಪ್ ಪುರೋಹಿತ್ ಸ್ವೀಟ್ ಮಾರ್ಟ್ ನಲ್ಲಿ ಕುಂದಾ ಮತ್ತು ಕರದಂಟು ಖರೀದಿಸಿದರು.

ಪಂಚಮಸಾಲಿ ಸಮುದಾಯದವರು 2ಎ ಮೀಸಲಾತಿಗೆ ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿದ್ದು, ನಾಳೆಯೊಳಗಾಗಿ ಸಿಎಂ ಬೊಮ್ಮಾಯಿ ಮೀಸಲಾತಿ ಘೋಷಣೆ ಮಾಡಬೇಕು. ಮೀಸಲಾತಿ ಘೋಷಿಸಿದರೆ ವಿಜಯೋತ್ಸವ ಇಲ್ಲವಾದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಸ್ವಾಮೀಜಿ ಎಚ್ಚರಿಸಿದ್ದಾರೆ. ನಾಳೆ ಬೆಳಿಗ್ಗೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತಯಾರಿ ನಡೆಸಿದ್ದಾರೆ.

ಈ ನಡುವೆ ಸಿಎಂ ಬೊಮ್ಮಾಯಿ ಕುಂದಾ ಖರೀದಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಅಧಿವೇಶನ ಮುಗಿದ ಬಳಿಕ ವಾಪಸ್ ಹೊರಡುವಾಗ ಕುಂದಾ ಖರೀದಿಸುವುದು ವಾಡಿಕೆ. ಆದರೆ ಅಧಿವೇಶನ ನಡೆಯುತ್ತಿರುವಾಗಲೇ ಮುಖ್ಯಮಂತ್ರಿಗಳು ಕುಂದಾ ಖರೀದಿಸಿದ್ದು, ನಾಳೆ ಪಂಚಮಸಾಲಿ ಸಮುದಾಯ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವೇಳೆ ಸಿಹಿಸುದ್ದಿ ಘೋಷಿಸಿ ಸ್ವಾಮೀಜಿಗಳಿಗೆ ಸಿಎಂ ಕುಂದಾ ನೀಡಲಿದ್ದಾರೆಯೇ ಎಂಬ ಕುತೂಹಲವನ್ನುಂಟುಮಾಡಿದೆ.

ಒಟ್ಟಾರೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸುವ ಮೂಲಕ ಸಿಎಂ ಸಿಹಿ ಸುದ್ದಿ ನೀಡಲಿದ್ದಾರಾ? ಸ್ವಾಮೀಜಿಗೆ ಕುಂದಾ ನೀಡಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಜೊತೆಯಲ್ಲಿದ್ದರು.

*ಶಾಸಕರಿಗೆ ಗೌರವ ಇಲ್ವಾ? ಸಚಿವರ ವರ್ತನೆ ಸರಿಯಿಲ್ಲ; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ*

https://pragati.taskdun.com/belagavi-sessionsiddaramaiahgovinda-karajolamadhuswamy/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button