Kannada NewsLatest

ಕ್ವಾರಂಟೈನ್ ನಲ್ಲಿದ್ದ ಮಹಿಳೆ ಎಸ್ಕೇಪ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕು ದಿನದಿಂದ ದಿನಕ್ಕೆ ಅಟ್ಟಹಾಸ ಮುಂದುವರೆಸಿದ್ದು, ಈ ನಡುವೆ ಕ್ವಾರಂಟೈನ್ ನಲ್ಲಿದ್ದ ಮಹಿಳೆಯೊಬ್ಬರು ಎಸ್ಕೇಪ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.

ಗೋಕಾಕ್ ಕ್ವಾರಂಟೈನ್ ಕೇಂದ್ರದಲ್ಲಿದ್ದ 30 ವರ್ಷದ ಮಹಿಳೆ ಇದೀಗ ಕ್ವಾರಂಟೈನ್ ನಿಂದ ತಪ್ಪಿಸಿಕೊಂಡಿದ್ದು, ಗೋಕಾಕ್ ತಾಲೂಕಿನಾದ್ಯಂತ ಕೊರೊನಾ ಆತಂಕ ಹೆಚ್ಚಿದೆ.

Home add -Advt

ಮಾಹಾರಾಷ್ಟ್ರದಿಂದ ಗೋಕಾಕ್ ಗೆ ವಾಪಸ್ ಆಗಿದ್ದ ಮಹಿಳೆಯನ್ನು ಕ್ವಾರಂಟೈನ್ ನಲ್ಲಿ ಇರಿಸಲಗೈತ್ತು. ಈ ಕೆಯ ಪತಿ ಪೆರೋಲ್ ಮೇಲೆ ಬಿಡುಗಡೆಯಾಗಿ ಬಂದಿದ್ದರು ಎನ್ನಲಾಗಿದೆ. ಹೀಗಾಗಿ ಮಹಿಳೆ ಪತಿಯ ಜತೆ ಎಸ್ಕೇಪ್ ಆಗಿರಬಹುದು ಎಂದು ಶಂಕಿಸಲಾಗಿದೆ.

ಎಸ್ಕೇಪ್ ಆಗಿರುವ ಅಹಿಳೆ ಹಾಗೂ ಆಕೆಯ ಪತಿಗಾಗಿ ಪೊಲೀಸರು ಹುಡುಕುತ್ತಿದ್ದು, ಗೋಕಾಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

 

Related Articles

Back to top button