Latest

ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಕರ್ತವ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಯಾರು ಏನು ಹೇಳಿಕೆ ಕೊಡುತ್ತಾರೋ ಆ ಹೇಳಿಕೆಗಳಿಗೆ ಅವರೇ ಜವಾಬ್ದಾರರು ಹಾಗೂ ಅವರ ಹೇಳಿಕೆಗೆ ತಕ್ಕಂತೆ ದಾಖಲೆ, ಪುರಾವೆಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಯಾರು ಏನು ಹೇಳಿಕೆ ನೀಡುತ್ತಾರೋ ಅದಕ್ಕೆ ಬದ್ಧವಾಗಿ ದಾಖಲೆಗಳನ್ನು ನೀಡಲಿ. ತನಿಖೆಗೆ ಅದನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಪಿ.ಎಸ್.ಐ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ದಾಖಲೆಗಳನ್ನು ಒದಗಿಸಿದರೆ ತನಿಖೆಗೆ ಒಳಪಡಿಸುತ್ತೇವೆ ಎಂದರು.

ಪ್ರಿಯಾಂಕ್ ಖರ್ಗೆಯವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ:
ಪ್ರಿಯಾಂಕ ಖರ್ಗೆ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ. ಖರ್ಗೆ ಮೂಲ ಕಾಂಗ್ರೆಸ್ಸಿಗರು. ಅವರಿಗೆ ಇದೆಲ್ಲಾ ಕರಗತ ಆಗಿದೆ. ಖರ್ಗೆಯವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Home add -Advt

ಬಿಜೆಪಿ ಪರವಾದ ಅಲೆ:

ರಾಜ್ಯದಲ್ಲಿ ಬಿ.ಜೆ.ಪಿ ಪರವಾದ ಅಲೆ ಇದೆ. ಅದರ ಪ್ರಭಾವದಿಂದ ಹಲವಾರು ಕ್ಷೇತ್ರಗಳಲ್ಲಿ ಪ್ರಥಮ ಬಾರಿಗೆ ವಿಜಯವನ್ನು ಸಾಧಿಸುವ ಅವಕಾಶಗಳು ಸಿಕ್ಕಿವೆ. ಪಕ್ಷದ ಸಿದ್ದಾಂತ ವನ್ನು ಒಪ್ಪಿ ಬರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಜನ ಬಿಜೆಪಿ ಸೇರಲಿದ್ದಾರೆ.

ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ಪಕ್ಷದ ಜಿಲ್ಲಾ ಮತ್ತು ರಾಜ್ಯ ಘಟಕ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಧ್ವೇಷ-ಅಸೂಯೆ-ಅಶಾಂತಿಗೆ ಸರ್ಕಾರ ಅವಕಾಶ ಕೊಡಬಾರದು; ಸಮಾನತೆ ಇದ್ದರೆ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ – ಸಿದ್ದರಾಮಯ್ಯ

Related Articles

Back to top button