Latest

ಪೊದೆಯಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಹುಲಿ ದಾಳಿ; ಯುವಕ ಸಾವು; ಯುವತಿ ಪಾರು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಪ್ರೇಮಿಗಳಿಬ್ಬರೂ ಕಾಡಿನ ಪೊದೆಯಲ್ಲಿ ಏಕಾಂತದಲ್ಲಿದ್ದಾಗ ಹುಲಿಯೊಂದು ದಾಳಿಯಿಟ್ಟಿದ್ದು, ಯುವಕ ಸ್ಥಳಲ್ಲೇ ಮೃತಪಟ್ಟರೆ ಯುವತಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯದಲ್ಲಿ ನಡೆದಿದೆ.

Home add -Advt

ಚೋಪ್ (ಕೊರೆಗಾಂವ್) ನಿವಾಸಿ ಅಜಿತ್ ಸೋಮೇಶ್ವರ ನಾಕಾಡೆ ಮೃತ ಯುವಕ. ಅಜಿತ್ ತನ್ನ ಪ್ರಿಯತಮೆಯೊಂದಿಗೆ ಕಾಡಿಗೆ ತೆರಳಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ.

ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಯುವಕನ ಮುಖ, ಬೆನ್ನಿನ ಭಾಗವನ್ನು ಹುಲಿ ತಿಂದು ಹಾಕಿದ್ದು, ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವತಿಗೂ ಗಂಭೀರ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹುಲಿ ಓಡಾಟದ ಬಗ್ಗೆ ಅರಣ್ಯ ಇಲಾಖೆಯಿಂದ ಎಚ್ಚರಿಕೆ ಬೋರ್ಡ್ ಕೂಡ ಹಾಕಲಾಗಿತ್ತು. ಆದಾಗ್ಯೂ ಸಮೀಪದಲ್ಲಿಯೇ ತನ್ನ ವಾಹನ ನಿಲ್ಲಿಸಿ ಅಜಿತ್ ಯುವತಿಯನ್ನು ಕಾಡಿಗೆ ಕರೆದೊಯ್ದಿದ್ದ ಎನ್ನಲಾಗಿದೆ.

KSRP ಅಸಿಸ್ಟೆಂಟ್ ಕಮಾಂಡೆಂಟ್ ಬಂಧಿಸಿದ ಸಿಐಡಿ

Related Articles

Back to top button