ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಡಿನೋಟಿಫಿಕೇಷನ್ ಫೈಟ್ ಆರಂಭವಾಗಿದ್ದು, ಸದನದಲ್ಲಿ ಸಿಎಂ ಬೊಮ್ಮಾಯಿ ಸುಳ್ಳು ಹೇಳಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸುಳ್ಳು ಹೇಳಿದ್ದು ಸಿದ್ದರಾಮಯ್ಯ ಹೊರತು ನಾನಲ್ಲ ಎಂದು ಖಡಕ್ ಉತ್ತರ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾದಿದ ಸಿಎಂ ಬೊಮ್ಮಾಯಿ, ಕೆಂಪಣ್ಣ ಆಯೋಗದ ವರದಿಯನ್ನು ನಾನು ಓದಿದ್ದೇನೆ. ನಾನು ಸುಳ್ಳು ಹೇಳುವ ಪ್ರಶ್ನೆಯೇ ಇಲ್ಲ ಎಂದರು.
ಅರ್ಕಾವತಿ ರೀಡೂ ಬಗ್ಗೆ ಬೊಮ್ಮಾಯಿ ಹೇಳುತ್ತಿರುವುದಲ್ಲ, ನ್ಯಾ.ಕೆಂಪಣ್ಣನವರೇ ಹೇಳಿದ್ದಾರೆ. ಆದೇಶದಲ್ಲಿಯೇ ಸ್ಪಷ್ಟವಾಗಿದೆ. ಅದನ್ನು ನಾನು ಹೇಳಿದ್ದೇನೆ. ಆದೇಶದಲ್ಲಿ ಏನು ಬಂತು ಅದು ಮುಖ್ಯ ಅಲ್ವಾ? ಈಗಾಗಲೇ ಏನು ಕ್ರಮ ಕೈಗೊಳ್ಳಬೇಕು ಅದನ್ನು ಕೈಗೊಳ್ಳುತ್ತೆವೆ. ಒಂದಂತು ನಿಜ. ಸುಳ್ಳು ಹೇಳುತ್ತಿರುವುದು ಸಿದ್ದರಾಮಯ್ಯ. ಕಟುಸತ್ಯ ಎದುರಿಸುವ ಕಾಲ ಸಿದ್ದರಾಮಯ್ಯನವರಿಗೆ ಬಂದಿದೆ ಎಂದು ಹೇಳಿದರು.
*JDS ಎಂಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ; ಪ್ರತಿಷ್ಠಿತ ಶೋ ರೂಂ ಮಾಲೀಕ ವಶಕ್ಕೆ*
https://pragati.taskdun.com/mlc-bhojegowdacar-numberattempt-to-sellstolen-caracused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ