ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೋಟರ್ ಐಡಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆ ಹಾಸ್ಯಾಸ್ಪದ. ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗವೇ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡುತ್ತದೆ. ಹೀಗಿರುವಾಗ ಕಾಂಗ್ರೆಸ್ ನಾಯಕರ ಆರೋಪ ಆಧಾರ ರಹಿತವಾದದ್ದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಾಂಗ್ರೆಸ್ ನವರುನಿಜವಾಗಿಯೂ ಅವರ ವಿಚಾರದಲ್ಲಿ ದಿವಾಳಿಯಾಗಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಬಿಬಿಎಂಪಿ, ಅಥವಾ ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿರುತ್ತದೆ. ಅದರಂತೆ ಅವರು ಎನ್ ಜಿ ಒ ಗಳಿಗೆ ಅನುಮತಿ ನೀಡಿರುತ್ತಾರೆ ಇದು ವಿಷಯ. ಆದರೆ ಕಾಂಗ್ರೆಸ್ ಮಾಡುತ್ತಿರುವ ಆರೋಪ ಹಾಸ್ಯಾಸ್ಪದ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗ ಸರ್ವೆ ನಡೆಸುವುದು ಇದು ಮೊದಲಬಾರಿಯಲ್ಲ. ಈ ಹಿಂದೆನಿಂದಲೂ ಹೀಗೆ ಆಯೋಗದ ಸೂಚನೆ ಅಡಿಯಲ್ಲಿ ವೋಟರ್ ಐಡಿ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಇಲ್ಲಿ ಅನುಮತಿ ಪಡೆದ ಎನ್ ಜಿಒ ಮತದಾರರ ಮಾಹಿತಿ ಸಂಗ್ರಹಿಸಿ ದುರ್ಬಳಕೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಕಾಂಗ್ರೆಸ್ ದೂರು ನೀಡಿದರೆ ಸಮಗ್ರ ತನಿಖೆ ನಡೆಸುತ್ತೇವೆ. ಆಗ ಸತ್ಯಾಂಶ ಹೊರಬರಲಿದೆ ಎಂದರು.
ಕಾಂಗ್ರೆಸ್ ಹೇಳಿಕೆಯನ್ನು ಹಿಡಿದುಕೊಂಡರೆ ಹಾಗಿದ್ದರೆ ಅವರು ನೂರು ಬಾರಿ ರಾಜೀನಾಮೆ ನೀಡಬೇಕಿತ್ತು. ಚುನಾವಣಾ ಆಯೋಗದ ಸೂಚನೆ, ಬಿಬಿಎಂಪಿ ಎನ್ ಜಿಒ ಗೆ ಕೊಟ್ಟದ್ದು, ಎನ್ ಜಿ ಒ ಸಂಸ್ಥೆ ವೋಟರ್ ಐಡಿ ಪರಿಷ್ಕರಣೆ ಮಾಡಿದ್ದು, ದುರ್ಬಳಕೆ ಮಾಡಿಕೊಂಡಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ತನಿಖೆಗೆ ಸೂಚಿಸುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ ಬಂಧಿಸಿ; ಕಮಿಷ್ನರ್ ಗೆ ಕಾಂಗ್ರೆಸ್ ದೂರು
https://pragati.taskdun.com/voter-id-scamcongresscm-basavaraj-bommai/
ವೋಟರ್ ಐಡಿ ಅಕ್ರಮ: ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು
https://pragati.taskdun.com/chelume-ngocancellation-permissionrevision-of-voter-listbbmp/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ