*ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ ಎಂದ ಸುರ್ಜೇವಾಲಾ; ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ ಎಂದ ಮುಖ್ಯಮಂತ್ರಿಗಳು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಕುನಿ ಇದ್ದಂತೆ ಕೊನೆಗೆ ಪಾಂಡವರೇ ಗೆಲ್ಲುವುದು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.
ಮೀಸಲಾತಿ ವಿಚಾರವಾಗಿ ಸಿಎಂ ಬೊಮ್ಮಾಯಿ ಜನತೆಗೆ ಮೋಸ ಮಾಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇದೆ. 90 ದಿನಗಳಲ್ಲಿ 3 ಬಾರಿ ಮೀಸಲಾತಿ ಬದಲಾವಣೆ ಮಾಡಿದ್ದಾರೆ. ಇದು ಇತಿಹಾಸದಲ್ಲಿಯೇ ಮೊದಲು. ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ ಕೊನೆ ಪಾಂಡವರೇ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದಾರೆ.
ರಣದೀಪ್ ಸುರ್ಜೇವಾಲಾ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಸುರ್ಜೇವಾಲಾ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ರಾಜ್ಯದ ಜನ ನನ್ನನು ಕಾಮನ್ ಮೆನ್ ಸಿಎಂ ಎಂದು ಕರೆಯುತ್ತಿದ್ದಾರೆ. ನಾನು ಕಾಮನ್ ಮೆನ್ ಆಗಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಮಾತನಾಡಿದ ಸಿಎಂ, ಯಾರು ಶಕುನಿ, ಯಾರು ದುರ್ಯೋಧನ ಎಂದು ಜನರಿಗೆ ಗೊತ್ತಿದೆ. ರಣದೀಪ್ ಸಿಂಗ್ ಸುರ್ಜೇವಾಲ ಏನುಬೇಕಾದರೂ ಹೇಳಿಕೊಳ್ಳಲಿ. ಜನರಿಗೆ ಗೊತ್ತಿದೆ. ಅದಕ್ಕೆ ಅವರು ಅಲ್ಲಿರುವುದು. ನಾನು ಈ ಸ್ಥಾನದಲ್ಲಿರುವುದು ಎಂದು ಟಾಂಗ್ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ