ಪ್ರಗತಿವಾಹಿನಿ ಸುದ್ದಿ; ಹಾವೇರಿ: ವಿವಿಧ ರಾಜ್ಯಗಳ ಜನರು ಕರ್ನಾಟಕದಲ್ಲಿ ನೆಲೆಸಿದ್ದಾರೆ. ಇದು ನಮ್ಮ ದೇಶದ ಸಂಸ್ಕೃತಿ ಹಾಗೂ ಧಾರ್ಮಿಕ ಸಂಬಂಧಗಳು ಅನ್ಯೋನ್ಯತೆಗೆ ಕಾರಣವಾಗಿದ್ದು, ಇದನ್ನು ಉಳಿಸಿಕೊಳ್ಳುವುದು ಭಾರತದ ಏಕತೆ, ಅಖಂಡತೆಗೆ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಶಿಗ್ಗಾವಿಯ ಮರಾಠ ಭವನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನೆಲ, ಜಲ, ಭಾಷೆ,ಸಂಸ್ಕೃತಿ ಎಲ್ಲವನ್ನೂ ಮರಾಠ ಸಮಾಜ ಒಗ್ಗೂಡಿಸಿದೆ. ಅವರೂ ಹೆಮ್ಮೆಯ ಕನ್ನಡಿಗರಾಗಿದ್ದು, ಇದು ಸಂಸ್ಕಾರಯುತ ಸಾಂಸ್ಕೃತಿಕ ಸಂಬಂಧವನ್ನು ಗೌರವಿಸಬೇಕು. ಇಡೀ ದೇಶದಲ್ಲಿ ಕನ್ನಡಿಗರದ್ದು, ಅಲ್ಲಿಯ ಭಾಷೆ ಸಂಸ್ಕೃತಿ ಕಲಿತು, ಅಲ್ಲಿನವರ ಜೊತೆ ಅನ್ಯೋನ್ಯವಾಗಿದ್ದಾರೆ ಎಂದರು.
ಹಿಂದೂ ಸಮಾಜ ಕಟ್ಟುವಲ್ಲಿ ಶಿವಾಜಿ ಮಹಾರಾಜರ ಪಾತ್ರ ಹಿರಿದು :
ಭಾರತ ಪ್ರಜಾಪ್ರಭುತ್ವವಿರುವ ದೇಶ. ವಿವಿಧ ಜಾತಿ, ಸಮುದಾಯ, ಬುಡಕಟ್ಟು ಜನಾಂಗಳು ಸೇರಿದಂತೆ ಎಲ್ಲ ವರ್ಗಗಳು ಇರುವ ದೇಶ. ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವಿರುವ ದೇಶ ಯಶಸ್ವಿಯಾಗಲು ಭಾರತದ ಸಂವಿಧಾನವೇ ಕಾರಣ. ಸಂವಿಧಾನ ಸಮಾನತೆ, ಭ್ರಾತೃತ್ವದ ಭಾವವನ್ನು ತುಂಬು ಮೂಲಕ ಭಾರತವನ್ನು ಒಗ್ಗಟ್ಟಿನಿಂದ ಇರುವಂತಾಗಿದೆ. ಇದನ್ನು ಆಗಮಾಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಸದಾ ನೆನಪಿನಲ್ಲಿಡಬೇಕು. ತಮ್ಮ ಮಾನಪಮಾನಗಳನ್ನು ಮರೆತು ದೇಶದ ಚಿಂತನೆ ಮಾಡಿದರು. ಜನಸಮುದಾಯ, ಸಂಸ್ಕೃತಿ , ಚಾರಿತ್ರ್ಯಗಳಿಂದ ದೇಶವಾಗುತ್ತದೆ. ಸ್ವಾತಂತ್ರ್ಯಪೂರ್ವ ಹೋರಾಟದಲ್ಲಿ ಹಿಂದೂ ಸಮಾಜವನ್ನು ಕಟ್ಟುವಲ್ಲಿ ಶಿವಾಜಿ ಮಹಾರಾಜರ ಪಾತ್ರ ಹಿರಿದಾಗಿದೆ. ಕನ್ನಡ ನಾಡಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಮದಕರಿ ನಾಯಕರಂತಹ ಹೋರಾಟಗಾರರಂತೆ ಶಿವಾಜಿ ಮಹಾರಾಜರು ಕೂಡ ಐತಿಹಾಸಿಕವಾದ ಚಾರಿತ್ರಿಕ ಪಾತ್ರವನ್ನು ವಹಿಸಿದ್ದಾರೆ. ಕರ್ನಾಟಕದಲ್ಲಿ ಮರಾಠ ಸಮುದಾಯ ನೂರಾರು ವರ್ಷಗಳಿಂದ ಇದೆ ಎಂದರು.
ಸಮಾಜದ ಉನ್ನತಿಗೆ ಭವನ ಬಳಕೆಯಾಗಲಿ :
ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ 100 ಕೋಟಿ ರೂ. ಅನುದಾನ ನೀಡಲಾಗಿದೆ. ಮಕ್ಕಳ ವಿದ್ಯಾಭ್ಯಾಸ, ವಿದೇಶದಲ್ಲಿ ಶಿಕ್ಷಣ, ವಿದ್ಯಾರ್ಥಿವೇತನ, ಸ್ವಯಂಉದ್ಯೋಗ, ರೈತರಿಗೆ ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮುದಾಯ ಭವನ ಕ್ರಿಯಾಶೀಲ ಚಟುವಟಿಕೆಗಳಿಗೆ, ಸಮಾಜದ ಉನ್ನತಿಗೆ ಭವನ ಉಪಯೋಗವಾಗಲಿ, ಸಮಾಜದ ವಿದ್ಯಾರ್ಥಿಗಳಿಗೆ ತರಬೇತಿ, ಶಿಬಿರಗಳಾಗಲಿ. ಉನ್ನತ ಶಿಕ್ಷಣಕ್ಕೆ ತರಬೇತಿ ನೀಡಲು ಭವನ ಸದ್ಬಳಕೆಯಾಗಲಿ. ಛತ್ರಪತಿ ಶಿವಾಜಿ ಮಹಾರಾಜರ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ ಸುಭಾಶ್ ಚೌಹಾಣ್ ಅವರ ಕುಟುಂಬದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಶಿಗ್ಗಾವಿ ಕ್ಷೇತ್ರ ಮಾದರಿಯಾಗಬೇಕಾದರೆ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಿಲ್ಲ. ಎಲ್ಲ ಸಮಾಜಗಳು ಅನ್ಯೋನ್ಯತೆ, ಸಹಾಯ ಸಹಕಾರದಿಂದ ಬದುಕುವುದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ನಿಗದಿತ ಸಮಯದಲ್ಲಿ ಉತ್ತಮ ಗುಣಮಟ್ಟದ ಭವನವಾಗಲಿ ಎಂದು ಹಾರೈಸಿದರು.
ವೇದಾಂತಾಚಾರ್ಯ ಜಗದ್ಗುರು ಶ್ರೀ ಮಂಜುನಾಥ ಭಾರತಿ, ಸ್ವಾಮೀಜಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
*ಮಂತ್ರಿ ಆಗ್ತೀವೊ ಬಿಡ್ತೀವೋ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿಶೆಷವಾಗಿ ಕೆಲಸ ಮಾಡ್ತೀವಿ ಎಂದ ಮಾಜಿ ಸಚಿವ*
https://pragati.taskdun.com/ramesh-jarakiholireactioncabinet-extentionbelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ