Latest

ಸಿಎಂ ಬೊಮ್ಮಾಯಿ ನಾಳಿನ ಕಾರ್ಯಕ್ರಮಗಳು ರದ್ದು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅನಿವಾರ್ಯ ಕಾರಣಗಳಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

ಇಂದು ಮಧ್ಯಾಹ್ನ ನಡೆಯಬೇಕಿದ್ದ ಜಿಎಸ್ಟಿ ಕೌನ್ಸಿಲ್ ನ ಗ್ರೂಪ್ ಆಫ್ ಮಿನಿಸ್ಟರ್ಸ್ ಮೀಟಿಂಗ್ ಕೂಡ ಮುಂದೂಡಲಾಗಿದೆ. ನಾಳೆಯ ಚಿಕ್ಕಮಗಳೂರು, ಹಾಸನ ಜಿಲ್ಲಾ ಪ್ರವಾಸವನ್ನು ಕೂಡ ಮುಂದೂಡಲಾಗಿದೆ. ನಾಳೆ ಶೃಂಗೇರಿ ಶಾರದಾಂಬೆ ದರ್ಶನ ಪಡೆಯಬೇಕಿದ್ದ ಸಿಎಂ ಬಸವರಾಜ್ ಬೊಮ್ಮಯಿ ಅನಿವಾರ್ಯಕಾರಣಗಳಿಂದ ದಿಢೀರ್ ತಮ್ಮ ಪ್ರವಾಸ ರದ್ದುಕೊಳಿಸಿದ್ದಾರೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳಿನ ಶಿವಮೊಗ್ಗ ಪ್ರವಾಸವನ್ನು ರದ್ದು ಮಾಡಿದ್ದಾರೆ.

ಇಂದು ಪುನೀತ್ ಭೇಟಿಗೆ ಸಮಯ ನಿಗದಿ ಮಾಡಿದ್ದೆ; ಆದರೆ ವಿಧಿಯಾಟವೇ ಬೇರೆಯಾಗಿತ್ತು; ಸಿಎಂ ಸಂತಾಪ:

ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಆಘಾತವನ್ನುಂಟು ಮಾಡಿದೆ. ಅವರನ್ನು ಉಳಿಸಿಕೊಳ್ಲುವ ನಿಟ್ಟಿನಲ್ಲಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕಂಬನಿಮಿಡಿದಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ತುಂಬಲಾರದ ನಷ್ಟ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ದ ಸಾಧನೆ ಮಾಡಿದ್ದರು. ತಮ್ಮ ತಂದೆಯ ಗುಣಗಳನ್ನೇ ಅಳವಡಿಸಿಕೊಡಿದ್ದರು. ಸರಳ ವ್ಯಕ್ತಿತ್ವವನ್ನು ಹೊಂದಿದವರು. ಪುನೀತ್ ಹಾಗೂ ನಮ್ಮ ಒಡನಾಟ ತುಂಬಾ ವರ್ಷಗಳ ಹಳೆಯದ್ದು ಎಂದು ಹೇಳಿದರು.

ನಿನ್ನೆಯಷ್ಟೇ ಪುನೀತ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೆ. ಇಂದು ಅವರ ಭೇಟಿಗಾಗಿ ಸಮಯವನ್ನೂ ನೀಡಿದ್ದೆ. ಆದರೆ ಅಷ್ಟರಲ್ಲಿ ಹೀಗಾಗಿದೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಖಾಸಗಿ ವೆಬ್ ಸೈಟ್ ಲಾಂಚ್ ಮಾಡುವ ಬಗ್ಗೆ ಮಾತನಾಡಲು ಇಂದು ಪುನೀತ್ ಭೇಟಿಯಾಗಬೇಕಿತ್ತು. ಆದರೆ ವಿಧಿಯಾಟ ಬೇರೆಯಾಗಿದೆ ಅವರನ್ನು ಬೇರೆಡೆ ಕೊಂಡೊಯ್ದಿದೆ ಎಂದು ದು:ಖ ವ್ಯಕ್ತಪಡಿಸಿದ್ದಾರೆ.

 

ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಅವಕಾಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button